Tuesday, June 30, 2026
spot_imgspot_img
spot_imgspot_img

ವಿಡೀಯೋ ಕಾಲ್‌ನಲ್ಲಿ ಬೆತ್ತಾಲಾಗು ಎಂದ ಪತಿ; ಅತ್ತೆ ಮಾವನೂ ಇದಕ್ಕೆ ಫುಲ್ ಸಪೋರ್ಟ್ – FIR ದಾಖಲು

- Advertisement -
- Advertisement -

ಇಲ್ಲೊಬ್ಬ ಅಸಾಮಿ ಲಂಡನ್ ನಿಂದ ಭಾರತದಲ್ಲಿರುವ ಹೆಂಡತಿಗೆ ವಿಡಿಯೋ ಕಾಲ್ ಮೂಲಕ ಲೈಂಗಿಕ ಚಟುವಟಿಕೆ ನಡೆಸುವಂತೆ ಒತ್ತಾಯಿಸಿದ್ದು, ಗಂಡ ಹಾಗೂ ಅತ್ತೆ, ಮಾವನ ಮೇಲೂ ಎಫ್.ಐ.ಆರ್ ದಾಖಲಾದ ಘಟನೆ ನಡೆದಿದೆ.

ಮಹಿಳೆಯು ಅಹಮದಾಬಾದಿನ ಗೋಟಾ ಪ್ರದೇಶದ ನಿವಾಸಿಯಾಗಿದ್ದು, ಆರೋಪಿ ಪತಿಯನ್ನು ಕಳೆದ ವರ್ಷ ವಿವಾಹವಾಗಿದ್ದರು. ಮದುವೆಯ ನಂತರ ಪ್ರತಿದಿನ ಮನೆಗೆ ಕುಡಿದು ತಡವಾಗಿ ಬರುತ್ತಿದ್ದನು. ಮದುವೆಯಾದ ತಕ್ಷಣವೇ ನನ್ನನ್ನು ಹಿಂಸೆ ನೀಡಲು ಆರಂಭಿಸಿದ್ದ. ಅಲ್ಲದೇ ಯಾವುದೇ ಮಾಹಿತಿ ನೀಡದೇ ಮದುವೆಯಾದ ಮೂರೇ ದಿನಗಳಲ್ಲಿ ಅಂದರೆ ಆಗಸ್ಟ್ 25, 2020 ರಂದು ಲಂಡಗೆ ಸಹ ತೆರಳಿದ್ದಾನೆ. ನಂತರ ಅಶ್ಲೀಲ ಸಂದೇಶ ಕಳುಹಿಸುತ್ತಾ, ಬೆತ್ತಲೆ ಆಗುವಂತೆ ಪೀಡಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಲೈಂಗಿಕ ಸಂಭಾಷಣೆಯಲ್ಲಿ ಸಹಕರಿಸದಿದ್ದಾಗ, ಅವನು ತನ್ನನ್ನು ಫೋನ್‌ನಲ್ಲಿ ನಿಂದಿಸುತ್ತಿದ್ದನು. ಫೋನ್ ಕ್ಯಾಮರಾ ಮುಂದೆ ಬಟ್ಟೆ ತೆಗೆಯಲು ಹೇಳುತ್ತಾ ಅವರು ಅಶ್ಲೀಲ ಬೇಡಿಕೆಗಳನ್ನು ಇಡುತ್ತಿದ್ದನು. ನಾನು ನಿರಾಕರಿಸಿದಂತೆ, ಅವನು ನನ್ನನ್ನು ಹೊಡೆಯುವಂತೆ ನನ್ನ ಅತ್ತೆಮಾವನನ್ನು ಪ್ರಚೋದಿಸುತ್ತಿದ್ದನು ಎಂದು ಆಕೆ ಎಫ್‌ಐಆರ್‌ನಲ್ಲಿ ತಿಳಿಸಿದ್ದಾಳೆ. ಅಲ್ಲದೇ ನನ್ನ ಅತ್ತೆ ಮಾವ ತನ್ನ ಮನೆಯಿಂದ ಬಂಗಾರ ಮತ್ತು ವರದಕ್ಷಿಣೆ ಹಣವನ್ನು ತರುವಂತೆ ಪೀಡಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

- Advertisement -

Related news

error: Content is protected !!