Sunday, October 4, 2026
spot_imgspot_img
spot_imgspot_img

ಮಂಗಳೂರು: ಹಿಂದೂ ಎಂದು ನಂಬಿಸಿ ಮುಸ್ಲಿಂ ಯುವಕನಿಂದ ಯುವತಿಗೆ ವಂಚನೆ; FIR ದಾಖಲು!

- Advertisement -
- Advertisement -
driving

ಮಂಗಳೂರು: ಮುಸ್ಲಿಂ ಯುವಕನೊಬ್ಬ ತಾನು ಹಿಂದೂ ಎಂದು ನಂಬಿಸಿ ಯುವತಿಯೊಬ್ಬಳಿಗೆ ವಂಚಿಸಿರುವ ಘಟನೆ ಮಂಗಳೂರು ಮಹಿಳಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಕೊಣಾಜೆ ಸಮೀಪದ ಅಜ್ವಿನ್ ಎನ್ನಲಾಗಿದೆ.

ನಂಜನಗೂಡು ಮೂಲದ ಯುವತಿಗೆಯೊಬ್ಬರಿಗೆ ಆರೋಪಿ ಅಜ್ವಿನ್ ಮೈಸೂರಿನಲ್ಲಿ ಪರಿಚಯವಾಗಿದ್ದು, ತಾನು ಹಿಂದೂ ಧರ್ಮದ ವ್ಯಕ್ತಿಯೆಂದು ನಂಬಿಸಿದ್ದ. ಅಲ್ಲದೇ ಮದುವೆಯಾಗುವುದಾಗಿ ನಂಬಿಸಿದಾತ ಆ ಯುವತಿಯನ್ನು ಊಟಿಗೆ ಕರೆದೊಯ್ದು , ದೈಹಿಕ ಸಂಪರ್ಕ ನಡೆಸಿದ್ದ ಎನ್ನಲಾಗಿದೆ. ಅಲ್ಲದೇ ಯುವತಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ 35 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದ.

ಮೈಸೂರಿನ ಕೆ.ಆರ್ ನಗರದಲ್ಲಿ ತಾನು ಕೆಲಸ ಮಾಡುತ್ತಿದ್ದ ಅಂಗಡಿ ಮಾಲಿಕನ ಮನೆಯಲ್ಲಿ ಯುವತಿಯ ಮೇಲೆ ಹಲ್ಲೆಗೂ ಮುಂದಾಗಿದ್ದ ಎನ್ನಲಾಗಿದೆ. ಆ ವೇಳೆ ಯುವತಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು. ಮೈಸೂರಿನಲ್ಲಿ ಯುವಕ ನಾಪತ್ತೆಯಾಗಿ ಬಳಿಕ ಕೊಣಾಜೆಗೆ ಬಂದಿದ್ದ. ಈ ವಿಚಾರ ತಿಳಿದು ಸಂತ್ರಸ್ತ ಯುವತಿ ಆತನ ಮನೆಗೆ ಆಗಮಿಸಿದ ವೇಳೆ ಕುಟುಂಬಸ್ಥರು ಹಲ್ಲೆಗೈದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ .

ಈ ವೇಳೆ ಕೋಣಾಜೆ ಪೋಲಿಸ್ ಠಾಣೆಗೆ ತೆರಳಿದ ಯುವತಿ, ಅಲ್ಲಿ ತನ್ನ ದೂರು ತೆಗೆದುಕೊಳ್ಳದ ಕಾರಣ ಪಾಂಡೇಶ್ವ ರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಪಾಂಡೇಶ್ವರ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

driving
- Advertisement -

Related news

error: Content is protected !!