Friday, June 26, 2026
spot_imgspot_img
spot_imgspot_img

ಮೃತ ವ್ಯಕ್ತಿಯ ದೇಹದ ಮೇಲೆ ವಿಕೃತಿ ಮೆರೆದ ಛಾಯಾಗ್ರಾಹಕ!

- Advertisement -
- Advertisement -

ಅಸ್ಸಾಂ: ಮೃತ ವ್ಯಕ್ತಿಯ ದೇಹದ ಮೇಲೆ ಛಾಯಾಗ್ರಾಹಕನೊಬ್ಬ ದಾಳಿ ನಡೆಸಿ ವಿಕೃತ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಸ್ಸಾಂನ ಸಿಪಾಜಾರ್ ಭಾಗದಲ್ಲಿ ಸ್ಥಳೀಯ ಜನರಿಗೆ ಅವರ ಮನೆಗಳನ್ನು ಖಾಲಿ ಮಾಡಿಸಲು ಪೊಲೀಸರು ಶಸ್ತ್ರಸಜ್ಜಿತರಾಗಿ ತೆರಳಿದ್ದರು. ಈ ವೇಳೆ ಅವರೊಂದಿಗೆ ಛಾಯಾ ಗ್ರಾಹಕನೂ ತೆರಳಿದ್ದಾನೆ. ಪೊಲೀಸರ ದಾಳಿಯನ್ನು ಸ್ಥಳೀಯ ಜನ ಖಂಡಿಸಿ ಪ್ರತಿಭಟಿಸಿದ್ದು, ಈ ವೇಳೆ ಗನ್‌ ಮತ್ತು ಲಾಠಿ ಹಿಡಿದು ಶಸ್ತ್ರಸಜ್ಜಿತರಾಗಿ, ಗಲಭೆ ವಿರೋಧಿಸಿರುವ ಪೊಲೀಸರ ಗುಂಪನ್ನು, ಕೈಯ್ಯಲ್ಲಿ ಕೋಲು ಹಿಡಿದುಕೊಂಡು ಅಟ್ಟಿಸಿಕೊಂಡು ಬಂದ ವ್ಯಕ್ತಿಯೊಬ್ಬರನ್ನು ಪೊಲೀಸರು ಗುಂಡು ಹಾರಿಸಿ ಕ್ರೂರವಾಗಿ ಕೊಂದಿದ್ದಾರೆ.

ಈ ಅಮಾನವೀಯ ದಾಳಿಯ ಜೊತೆಗೆ ಛಾಯಾಗ್ರಾಹಕನೊಬ್ಬ ಮೃತ ವ್ಯಕ್ತಿಯ ದೇಹದ ಮೇಲೆ ದಾಳಿ ನಡೆಸಿ ವಿಕೃತ ಮೆರೆದಿರುವ ವಿಡಿಯೋ ದೇಶದಾದ್ಯಂತ ವೈರಲ್ ಆಗಿದ್ದು ಆತನ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಮೃತ ವ್ಯಕ್ತಿಯ ಮೇಲೆ ದಾಳಿ ಮಾಡಿ ವಿಕೃತ ಮೆರೆದ ಛಾಯಾಗ್ರಾಹಕನನ್ನು ಬಿಜೋಯ್ ಬೋನಿಯಾ ಎನ್ನಲಾಗಿದೆ. ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!