Monday, September 14, 2026
spot_imgspot_img
spot_imgspot_img

ಕೋಟ: ನದಿಯಲ್ಲಿ ಈಜಲು ಹೋದ ವಿದ್ಯಾರ್ಥಿ ನೀರುಪಾಲು!

- Advertisement -
- Advertisement -

ಕೋಟ: ವಿದ್ಯಾರ್ಥಿಯೋರ್ವ ನದಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂದಾರ್ತಿ ಸಮೀಪ ನಂಚಾರಿನಲ್ಲಿ ರವಿವಾರ ಸಂಭವಿಸಿದೆ. ಮೃತ ವಿದ್ಯಾರ್ಥಿ ಕೇರಳ ಮೂಲದ ನಿವಾಸಿ ಜಿಬಿನ್‌ ಸಾಮ್‌ (20) ಎನ್ನಲಾಗಿದೆ .

ಮೃತ ವಿದ್ಯಾರ್ಥಿ ಮಧುವನ ಸಮೀಪದ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ನರ್ಸಿಂಗ್ ನಲ್ಲಿ‌ ವಿದ್ಯಾಭ್ಯಾಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಭಾನುವಾರದಂದು ಜಿಬಿನ್‌ ಸಾಮ್‌ ಸೇರಿ ಮೂವರು ಸ್ನೇಹಿತರು ಅಮುಲ್‌ ಬಿಜಿ ಎಂಬವರ ಮನೆಗೆ ಬಂದಿದ್ದರು. ಸ್ನೇಹಿತರ ಜೊತೆಯಲ್ಲಿ ನಂಚಾರು ಸಮೀಪದ ಸೀತಾ ನದಿಗೆ ಈಜಲು ತೆರಳಿದ್ದ ವೇಳೆ ನೀರಲ್ಲಿ ಮುಳುಗಿದ್ದಾನೆ.

ತಕ್ಷಣವೇ ಸ್ಥಳೀಯರು ಮೇಲಕ್ಕೆತ್ತಿ ಬ್ರಹ್ಮಾವರದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅದಾಗಲೇ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಈ ಘಟನೆಯ ಕುರಿತು ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ

- Advertisement -

Related news

error: Content is protected !!