Sunday, June 29, 2025
spot_imgspot_img
spot_imgspot_img

ಸುರತ್ಕಲ್: ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿದ್ದ ಬೊಲೆರೋ ವಾಹನವನ್ನು ಅಡ್ಡಗಟ್ಟಿ ಹಲ್ಲೆಗೆ ಯತ್ನ; ಐವರು ಪೊಲೀಸ್ ವಶಕ್ಕೆ!

- Advertisement -
- Advertisement -

ಸುರತ್ಕಲ್: ವಾಹನದಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದ ಕೆಲವು ವಿದ್ಯಾರ್ಥಿಗಳ ಮೇಲೆ ಯುವಕರ ಗುಂಪೊಂದು ದಾಳಿ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸುರತ್ಕಲ್ ಟೋಲ್ ಗೇಟ್ ಬಳಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ

ಘಟನೆಯ ವಿವರ:
ಬೊಲೆರೋ ವಾಹನದಲ್ಲಿ ದೇರಳಕಟ್ಟೆಯ ಖಾಸಗಿ ಕಾಲೇಜಿನ ಮೆಡಿಕಲ್ ವಿದ್ಯಾರ್ಥಿಗಳು ಸೇರಿದಂತೆ ಯುವಕ – ಯುವತಿಯರು ಮಲ್ಪೆ ಬೀಚ್ ಗೆ ತೆರಳಿ ಮಂಗಳೂರಿನತ್ತ ಬರುತ್ತಿದ್ದರು. ಈ ವೇಳೆ, ಹಿಂದು ಸಂಘಟನೆಗೆ ಸೇರಿದ ಯುವಕರ ಗುಂಪು ಅಡ್ಡಗಟ್ಟಿದ್ದು ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಲು ಮುಂದಾಗಿದೆ. ಈ ವೇಳೆ, ಸಿವಿಲ್ ಡ್ರೆಸ್ ನಲ್ಲಿದ್ದ ಮಂಗಳೂರಿನ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ಯುವಕರನ್ನು ತಡೆದಿದ್ದು ಹೊಡೆಯಬೇಡಿ ಎನ್ನುತ್ತಾ ಯುವಕರನ್ನು ಅಂಗಲಾಚಿದ್ದಾರೆ.

ಆದರೆ, ಯುವಕರು ಪೊಲೀಸ್ ಅಧಿಕಾರಿಯ ಮಾತು ಕೇಳದೆ ಬೊಲೆರೋ ವಾಹನದೊಳಗೆ ಇದ್ದವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇದರ ವಿಡಿಯೋವನ್ನು ಸ್ಥಳೀಯರು ರೆಕಾರ್ಡ್ ಮಾಡಿದ್ದು ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ವಿಡಿಯೋ ಭಾರೀ ವೈರಲ್ ಆಗಿದ್ದು ಇದರ ಬೆನ್ನಲ್ಲೇ ಸುರತ್ಕಲ್ ಪೊಲೀಸರು ಐವರನ್ನ ವಶಕ್ಕೆ ಪಡೆದಿದ್ದಾರೆ.

- Advertisement -

Related news

error: Content is protected !!