Tuesday, September 1, 2026
spot_imgspot_img
spot_imgspot_img

ಹೆಂಡತಿ ಮೃತಪಟ್ಟ ಬೆನ್ನಲ್ಲೇ ಸಿಆರ್​ಪಿಎಫ್ ಯೋಧ ಆತ್ಮಹತ್ಯೆ; ಅನಾಥವಾದ ಮಗು!

- Advertisement -
- Advertisement -

ಕೋಲಾರ: ವಿಷ ಸೇವಿಸಿ ಸಿಆರ್​ಪಿಎಫ್ ಯೋಧ(CRPF Soldier) ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ದೆಹಲಿ ಸೇನಾ ಆಸ್ಪತ್ರೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯೋಧ ಕೋಲಾರ ಜಿಲ್ಲೆ ಕೆಜಿಎಫ್ ನಿವಾಸಿ ದಿಲೀಪ್(34) ಎನ್ನಲಾಗಿದೆ.

vtv vitla

ಮೃತ ಯೋಧ ದಿಲೀಪ್ ಜಮ್ಮು ಕಾಶ್ಮೀರದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಉಳಿಸಿಕೊಳ್ಳಲು ದೆಹಲಿ ಸೇನಾ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದೆಯಷ್ಟೆ ಈತನ ಪತ್ನಿ ಕೂಡ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಈಗ ದಿಲೀಪ್ ಕೂಡ ಹೆಂಡತಿಯ ಹಾದಿಯನ್ನೇ ಹಿಡಿದಿದ್ದಾರೆ. ಆದ್ರೆ ಈಗ ತಂದೆ-ತಾಯಿಯ ಆತ್ಮಹತ್ಯೆಯಿಂದ ಒಬ್ಬ ಮಗು ಅನಾಥನಾಗಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

vtv vitla
- Advertisement -

Related news

error: Content is protected !!