Thursday, July 30, 2026
spot_imgspot_img
spot_imgspot_img

ಕೊಡಂಗಾಯಿ: ಮುಹ್ಯಿದ್ಧೀನ್ ಜುಮಾ ಮಸ್ಜಿದ್ ಆಡಳಿತ ಸಮಿತಿಯ ವಾರ್ಷಿಕ ಮಹಾಸಭೆ

- Advertisement -
- Advertisement -

ಕೊಡಂಗಾಯಿ: ಮುಹ್ಯಿದ್ಧೀನ್ ಜುಮಾ ಮಸ್ಜಿದ್ ಇದರ 2020/21ನೇ ಸಾಲಿನ ವಾರ್ಷಿಕ ಮಹಾಸಭೆಯು ಸದ್ರಿ ಜಮಾಅತಿನ ಗೌರವಾಧ್ಯಕ್ಷ ಅಸ್ಸಯ್ಯದ್ ಪೂಕುಂಞ ತಂಙಳ್ ಉದ್ಯಾವರ ಅವರ ಘಣ ಅಧ್ಯಕ್ಷತೆಯಲ್ಲಿ ಸದ್ರಿ ಮಸೀದಿ ಸಭಾಂಗಣದಲ್ಲಿ ಜರಗಿತು.

2020/21 ನೇ ಸಾಲಿನ ಜಮಾ ಖರ್ಚಿನ ವಿವರವನ್ನು ಕಾರ್ಯದರ್ಶಿಯವರು ಸಭೆಯಲ್ಲಿ ಮಂಡಿಸಿದ್ದು, ಸಭೆಯು ಸರ್ವಾನುಮತದಿಂದ ಅಂಗೀಕರಿಸಿತ್ತು. ಪ್ರಸ್ತುತ ಜಮಾಅತ್ ಕಮಿಟಿಯ ಗೌರವಾಧ್ಯಕ್ಷರಾಗಿ ಅಸ್ಸಯ್ಯದ್ ಪೂಕುಂಞ ತಂಙಳ್ ಉದ್ಯಾವರ, ಅಧ್ಯಕ್ಷರಾಗಿ ಎ ಎಂ ಮುಹಮ್ಮದ್ ಕುಂಞ, ಪ್ರಧಾನ ಕಾರ್ಯದರ್ಶಿಯಾಗಿ ಸಿ ಎಚ್ ಅಬ್ದುಲ್ ಖಾದರ್ ಚನಿಲ.

ಕೋಶಾಧಿಕಾರಿಯಾಗಿ ಹಕೀಂ ಮಾಡಾವು, ಉಪಾಧ್ಯಕ್ಷರಾಗಿ ಹನೀಫ್ ಪರ್ಲಾರ್, ಜೊತೆ ಕಾರ್ಯದರ್ಶಿಯಾಗಿ ಹುಸೈನ್ ಪಿ, ಹಾಗೂ 24 ಸದಸ್ಯರನ್ನೊಳಗೊಂಡ ಸಮಿತಿಯನ್ನು ಪುನರಾಯ್ಕೆಗೊಳಿಸಲಾಯಿತು. ಸದ್ರಿ ಸಭೆಯಲ್ಲಿ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಕೊನೆಯಲ್ಲಿ ಮೂರು ಸ್ವಲಾತಿನೊಂದಿಗೆ ಸಭೆಯು ಮುಕ್ತಾಯಗೊಂಡಿತು.

ವರದಿ: ಅಬೂ ಅಯಾನ್ ಕೊಡಂಗಾಯಿ

- Advertisement -

Related news

error: Content is protected !!