Wednesday, August 5, 2026
spot_imgspot_img
spot_imgspot_img

ಮಂಗಳೂರು: ಸಿಟಿ ಬಸ್ಸಿನ ಮೇಲೆ ಕಲ್ಲೆಸೆದು ಕಾಲ್ಕಿತ್ತ ಕಿಡಿಗೇಡಿಗಳು!!

- Advertisement -
- Advertisement -

ಮಂಗಳೂರು: ನಗರದಲ್ಲಿ ಸಂಚರಿಸುವ ಖಾಸಗಿ ಸಿಟಿ ಬಸ್ಸಿನ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದ ಘಟನೆ ಇಂದು ಮಧ್ಯಾಹ್ನ ನಗರದ ಕೊಟ್ಟಾರ ಚೌಕಿ ಸಮೀಪದ ಕರಾವಳಿ ಕಾಲೇಜು ಬಳಿ ನಡೆದಿದೆ. ಡಿಯೋ ದ್ವಿಚಕ್ರ ವಾಹನದಲ್ಲಿ ಬಂದ ಕಿಡಿಗೇಡಿಗಳು ಕೂಳೂರಿನಲ್ಲಿ ಎಸ್ ಎಂ ಟ್ರಾವೆಲ್ಸ್ ಎಂಬ ಬಸ್ಸಿಗೆ ಕಲ್ಲೆಸೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಸಿಟಿ ಬಸ್ಸು ನಂ.15ರ ಮೇಲೆ ಕಲ್ಲೆಸೆದಿದ್ದು ಇದರಿಂದಾಗಿ ಬಸ್ಸಿನ ಮುಂಭಾಗದ ಗಾಜು ಪುಡಿ ಪುಡಿಯಾಗಿದೆ. ಕೂಡಲೇ ದ್ವಿಚಕ್ರ ವಾಹನವನ್ನು ಬೆನ್ನಟ್ಟಿ ಹೋಗಿದ್ದು, ಈ ವೇಳೆ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಸಹ ಮಣ್ಣು ಹಿಡಿದಿತ್ತು. ಕಿಡಿಗೇಡಿಗಳು ಮುಸುಕು ಧರಿಸಿ ಬಂದಿದ್ದರಿಂದ ಯಾರೆಂದು ಗುರುತಿಸಲು ಸಾಧ್ಯವಾಗಿಲ್ಲ ಎಂದು ಬಸ್ ಚಾಲಕ ತಿಳಿಸಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಯಾವ ಕಾರಣವನ್ನಿಟ್ಟು ಈ ದುಷ್ಕೃತ್ಯ ನಡೆಸಿದ್ದಾರೆ ಎಂದು ತಿಳಿದುಬಂದಿಲ್ಲ.

- Advertisement -

Related news

error: Content is protected !!