- Advertisement -
- Advertisement -


ಮಂಗಳೂರು: ಖಾಸಗಿ ಎಕ್ಸ್ ಪ್ರೆಸ್ ಬಸ್ಸಿಗೆ ಕಿಡಿಗೇಡಿಗಳು ಕಲ್ಲೆಸೆದ ಘಟನೆ ಇಂದು ಮಧ್ಯಾಹ್ನ ಕೋಡಿಕಲ್ ಬಳಿ ಸಂಭವಿಸಿದೆ.


ಮಣಿಪಾಲ-ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಎ.ಕೆ.ಎಂ.ಎಸ್ ಎಕ್ಸ್ ಪ್ರೆಸ್ ಬಸ್ಸು ಕೋಡಿಕಲ್ ಕ್ರಾಸ್ ತಲುಪಿದಾಗ ದ್ವಿಚಕ್ರ ವಾಹನದಲ್ಲಿ ಬಂದ ಕಿಡಿಗೇಡಿಗಳು ಬಸ್ಸಿನ ಗಾಜಿಗೆ ಕಲ್ಲೆಸೆದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಕಲ್ಲೆಸೆತದಿಂದ ಬಸ್ಸಿನ ಗಾಜಿಗೆ ಹಾನಿಯಾಗಿದೆ.

ಕಿಡಿಗೇಡಿಗಳು ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಕಾಣದಂತೆ ಮರೆಮಾಚಿದ್ದು, ಇದರಿಂದ ಗುರುತು ಪತ್ತೆ ಹಚ್ಚಲಾಗಲಿಲ್ಲ.

- Advertisement -








