Tuesday, July 21, 2026
spot_imgspot_img
spot_imgspot_img

ವಿಟ್ಲ: ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮರುಮುದ್ರಣಗೊಂಡ ಶ್ರೀ ಸತ್ಯನಾರಾಯಣ ಪೂಜಾ ವಿಧಿ ಪುಸ್ತಕ ಬಿಡುಗಡೆ

- Advertisement -
- Advertisement -
vtv vitla

ವಿಟ್ಲ: ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಸಮೃದ್ಧಿ ಸ್ಥಾನದ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ವಿಧಿ ಪುಸ್ತಕ ಮರುಮುದ್ರಣಗೊಂಡು ಬಿಡುಗಡೆ ಕಾರ್ಯಕ್ರಮ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಕೋಲ್ಪೆಯಲ್ಲಿ ನಡೆಯಿತು.

vtv vitla

ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಸಮೃದ್ಧಿ ಸ್ಥಾನವು ಗ್ರಂಥ ಪ್ರಕಾಶನಗಳನ್ನು ಕಳೆದ 28 ವರ್ಷದಿಂದ ಮಾಡಿಕೊಂಡು ಬಂದಿದೆ. ಈಗಾಗಲೇ ಶ್ರೀ ಸತ್ಯನಾರಾಯಣ ಪೂಜಾ ವಿಧಿ 2000 ಪ್ರತಿ ಮಾರಾಟವಾಗಿದ್ದು, ಮತ್ತೆ 1000 ಪ್ರತಿ ಮಾರಾಟಕ್ಕೆ ಸಿದ್ಧಗೊಂಡಿದೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್, ಸಮೃದ್ಧಿ ಸ್ಥಾನದ ಸಂಚಾಲಕ ಮಿತ್ತೂರು ಪುರೋಹಿತ ತಿರುಮಲೇಶ ಭಟ್, ದೇವಸ್ಥಾನದ ಆಡಳಿತ ಮುಕ್ತೇಸರ ಕೆ ಎಸ್ ಸುರೇಶ್ ಭಟ್, ನಿರ್ದೇಶಕ ಕೊಂಕೋಡಿ ತಿರುಮಲೇಶ ಭಟ್, ಎಮ್ ಎಸ್ ನಾರಾಯಣ್, ರಾಜರಾಮ ಶೆಟ್ಟಿ ಕೋಲ್ಪೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

vtv vitla
vtv vitla
- Advertisement -

Related news

error: Content is protected !!