Monday, July 27, 2026
spot_imgspot_img
spot_imgspot_img

ಡಿ.26 ಕುಲಾಲ ಸಂಘ (ರಿ.) ವಿಟ್ಲ ಇದರ ವಾರ್ಷಿಕೋತ್ಸವ

- Advertisement -
- Advertisement -
vtv vitla
vtv vitla

ವಿಟ್ಲ ಫಿರ್ಕಾದ ಕುಲಾಲಬಾಂಧವರ 23ನೇ ವರ್ಷದ ವಾರ್ಷಿಕೋತ್ಸವವು ದಿನಾಂಕ 26.12.2021 ನೇ ಆದಿತ್ಯವಾರ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಬಳಿಯಿರುವ ಕುಲಾಲ ಸಂಘದ ಭವನದಲ್ಲಿ ನಡೆಯಲಿರುವುದು. ಪೂರ್ವಾಹ್ನ 7.30ಕ್ಕೆ ಗಣಹೋಮ,9.00ಕ್ಕೆ ಸತ್ಯನಾರಾಯಣ ಪೂಜೆ,11.00ಕ್ಕೆ ಸಭಾ ಕಾರ್ಯಕ್ರಮ, ಮಧ್ಯಾಹ್ನ ಅನ್ನ ಸಂತರ್ಪಣೆ ಹಾಗೂ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿರುವವು.

ಸಭಾ ಕಾರ್ಯಕ್ರಮವು ಕುಲಾಲ ಸಂಘದ ಅಧ್ಯಕ್ಷ ಬಿ. ಕೆ. ಬಾಬುರವರ ಅಧ್ಯಕ್ಷತೆಯಲ್ಲಿ, ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಕ್ಷೇತ್ರ ಮಾಣಿಲ ರವರು ಆಶೀರ್ವಚನ ನೀಡಲಿರುವರು.

vtv vitla
vtv vitla

ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ಶ್ರೀ ಪುರುಷೋತ್ತಮ ಚೆಂಡ್ಲ, ದ.ಕಜಿಲ್ಲಾ ಮಲೇರಿಯಾ ಅಧಿಕಾರಿ ಡಾl ನವೀನಚಂದ್ರ ಕುಲಾಲ್, ತುಳು ಕವಯಿತ್ರಿ, ಲೇಖಕಿ ಶ್ರೀಮತಿ ಕುಶಲಾಕ್ಷಿ ವಿ ಕುಲಾಲ್ ಕಣ್ವತೀರ್ಥ, ವಿಟ್ಲ ಕುಲಾಲ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸುಚಿತ್ರ ರಮಾನಾಥ ರವರ ಉಪಸ್ಥಿತಿಯಲ್ಲಿ ಜರಗಲಿರುವುದು. ಶಿಕ್ಷಣ ಕ್ಷೇತ್ರದಲ್ಲಿ ಉನ್ನತಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು.

ನಿರ್ಮಾಣ ಹಂತದಲ್ಲಿರುವ ಕಟ್ಟಡದ ಸಹಾಯಾರ್ಥವಾಗಿ ಮಾಡಿರುವ ಅದೃಷ್ಟ ಚೀಟಿಯ ಡ್ರಾವು ಈ ಕಾರ್ಯಕ್ರಮದಲ್ಲಿ ನಡೆಯಲಿರುವುದು. ಕುಲಾಲ ಭಾಂದವರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಕೋರಲಾಗಿದೆ.

vtv vitla
vtv vitla
- Advertisement -

Related news

error: Content is protected !!