Tuesday, June 30, 2026
spot_imgspot_img
spot_imgspot_img

ಮಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ಅನಿಲ ತುಂಬಿದ ಟ್ಯಾಂಕರ್ ಕುಮಟಾದಲ್ಲಿ ಪಲ್ಟಿ..!

- Advertisement -
- Advertisement -


ಕುಮಟಾ: ಇಲ್ಲಿನ ಹೊನಮಾಂವ ದೇವಸ್ಥಾನದ ಬಳಿ ಅನಿಲ ತುಂಬಿದ ಟ್ಯಾಂಕರ್ ಪಲ್ಟಿಯಾದ ಘಟನೆ ಜ.25ರಂದು ನಡೆದಿದೆ.

ಮಂಗಳೂರಿನಿಂದ ಬೆಳಗಾವಿಗೆ ಸಾಗಿಸುತ್ತಿದ್ದಾಗ ಲಾರಿಯ ಸಂಪರ್ಕ ತಪ್ಪಿದ ಟ್ಯಾಂಕರ್ ಕೆಳಗೆ ಉರುಳಿತು. ಆಗ ಟ್ಯಾಂಕರ್‌ನ ಸುರಕ್ಷಿತ ವಾಲ್ಟ್ ಸಡಿಲಗೊಂಡು ಸಣ್ಣ ಪ್ರಮಾಣದಲ್ಲಿ ಅನಿಲ ಸೋರಿಕೆ ಉಂಟಾಗಿತ್ತು.ಅದನ್ನು ತಕ್ಷಣ ನಿಲ್ಲಿಸಲಾಯಿತು. ಬಳಿಕ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಪಟ್ಟಣದ ಗಿಬ್ ವೃತ್ತದ ಸಿದ್ಧಾಪುರ – ಚಂದಾವರ ಮಾರ್ಗ ಮೂಲಕ ಹೊನ್ನಾವರದ ಎಲ್.ಐ.ಸಿ ಕಚೇರಿ ಬಳಿ ಹೆದ್ದಾರಿ ಸಂಪರ್ಕಿಸುವಂತೆ ಕ್ರಮ ಕೈಗೊಳ್ಳಲಾಯಿತು. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ನೆರವು ನೀಡಿದರು.

- Advertisement -

Related news

error: Content is protected !!