Tuesday, June 23, 2026
spot_imgspot_img
spot_imgspot_img

ಕಾಸರಗೋಡು: ವೀಸಾ ನೀಡುವ ಭರವಸೆ ನೀಡಿ ಹಣ ಪಡೆದು ವಂಚನೆ; ಇಬ್ಬರು ಅಂದರ್‌..!

- Advertisement -
- Advertisement -

ಕಾಸರಗೋಡು: ವಿದೇಶಕ್ಕೆ ಹೋಗಲು ವೀಸಾ ನೀಡುವ ಭರವಸೆ ನೀಡಿ ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿ ದ್ದಾರೆ.

ಬಂಧಿತರನ್ನು ತಳಂಗರೆಯ ಮುಹಮ್ಮದ್ ಕುಂಞಿ (46) ಮತ್ತು ಸೀತಾಂಗೊಳಿ ಮುಗು ವಿನ ಎಂ.ಅಬ್ದುಲ್ ಮುನೀರ್ (50) ಎಂದು ಗುರುತಿಸಲಾಗಿದೆ.

vtv vitla
vtv vitla

ಕ್ರೊಯೆಶ್ಯಾದಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ನೀಲೇಶ್ವ ದ ಅರುಣ್ ಕುಮಾರ್ ಮೊದಲಾದವರು ಎಂಬವರಿಂದ 2021 ರ ಜುಲೈ 15 ರಂದು 3.45 ಲಕ್ಷ ರೂ. ಪಡೆದಿದ್ದರು. ಆದರೆ ವೀಸಾ ಹಾಗೂ ನೀಡಿದ ಹಣವನ್ನು ಮರಳಿಸದೆ ವಂಚಿಸಿರುವುದಾಗಿ ಅರುಣ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದರು.

ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕಾಸರಗೋಡು ಪಾರೆ ಕಟ್ಟೆಯ ಕಿರಣ್ ರಾಜ್ ಎಂಬಾತನನ್ನು ಈ ಹಿಂದೆ ಬಂಧಿಸಲಾಗಿತ್ತು. ಮುಹಮ್ಮದ್ ಕುಂಞಿ ಹಾಗೂ ಅಬ್ದುಲ್ ಮುನೀರ್ ದೆಹಲಿಯಲ್ಲಿ ತಲೆ ಮರೆಸಿಕೊಂಡಿದ್ದರು. ದೆಹಲಿಗೆ ತೆರಳಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಇನನು ಆರೋಪಿಗಳಿಂದ ಆರು ಪಾಸ್ ಪೋರ್ಟ್ ಹಾಗೂ ಒಂದು ಎಟಿಎಂ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

vtv vitla
vtv vitla
- Advertisement -

Related news

error: Content is protected !!