Thursday, September 24, 2026
spot_imgspot_img
spot_imgspot_img

ಬಂಟ್ವಾಳ: ಶರತ್ ಮಡಿವಾಳ ಹತ್ಯೆ ಆರೋಪ; ಕಲ್ಲುರ್ಟಿ ದೈವದ ಮೊರೆ ಹೋದ ಮಾಜಿ ಸಚಿವ ರಮಾನಾಥ ರೈ

- Advertisement -
- Advertisement -
vtv vitla
vtv vitla

ಬಂಟ್ವಾಳ: ಕಳೆದ ವಿಧಾನಸಭಾ ಚುನಾವಣೆ ವೇಳೆ ಭಾರಿ ಸುದ್ದಿಯಾಗಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಗೆ ಸಂಬಂಧಿಸಿದಂತೆ ತನ್ನ ವಿರುದ್ಧ ಮಾಡಿದ್ದ ರಾಜಕೀಯ ಪ್ರೇರಿತ ಸುಳ್ಳು ಆರೋಪ ದೂರವಾಗಿ ನೈಜತೆ ಜನತೆಗೆ ತಿಳಿಯಬೇಕು’ ಮಾಜಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದ್ದಾರೆ.

ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ರಮಾನಾಥ ರೈ, ‘ಸತ್ಯ ಮತ್ತು ನೈಜತೆ ಹೊರಬರಬೇಕು. ಮಾತ್ರವಲ್ಲದೆ ಸುಳ್ಳು ಆರೋಪ ಮಾಡಿದವರಿಗೂ ಶಿಕ್ಷೆಯಾಗಬೇಕು’ ಎಂದು ಹೇಳಿಸಿದರು. ಶರತ್ ಮಡಿವಾಳ ಹತ್ಯೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ನೇರ ಕಾರಣ ಎಂದು ಮೃತನ ತಂದೆ ತನಿಯಪ್ಪ ಮಡಿವಾಳ ಅವರು ಇತ್ತೀಚಿಗೆ ಮಾಧ್ಯಮದ ಎದುರು ಮತ್ತೆ ಆರೋಪಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

- Advertisement -

Related news

error: Content is protected !!