- Advertisement -
- Advertisement -


ಬೆಂಗಳೂರು: ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ (ರಿ) ಇದರ ವತಿಯಿಂದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾಶಿವರಾತ್ರಿ 2 ನೇ ಮಹೊತ್ಸವ ಮಾರ್ಚ್ 1 ಮಂಗಳವಾರ ಬೆಳಗ್ಗೆ 7:30 ರಿಂದ ಮಾರ್ಚ್ 2 ಬುಧವಾರ ಬೆಳಗ್ಗೆ 6 ಗಂಟೆಯವರೆಗೆ ಬೆಂಗಳೂರಿನ ಹೆಚ್ ಎ ಎಲ್ 3ನೇ ಹಂತ, ಶಿಶು ಗೃಹ ಪೂರ್ಣಪ್ರಜ್ಞಾ ಸಾರ್ವಜನಿಕ ಆಟದ ಮೈದಾನದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಲೋಕಕಲ್ಯಾಣಾವಾಗಬೇಕೆಂಬ ಉದ್ದೇಶದಿಂದ ರುದ್ರಯಾಗ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್ 1 ಮಂಗಳವಾರದಂದು ಗಂಟೆ 7:30 ರಿಂದ ಗುರುಗಣಪತಿ ಪೂಜೆ, ಪಂಚಗವ್ಯ, ಪುಣ್ಯಹವಾಚನ, ಶಿವಲಿಂಗ ಪ್ರತಿಷ್ಠೆ, ಪ್ರಾಣಾ ಪ್ರತಿಷ್ಟಾಪನೆ, ಶತ ರುದ್ರಾಭಿಷೇಕ ನಡೆಯಲಿದೆ. ಹೀಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


- Advertisement -