Tuesday, July 28, 2026
spot_imgspot_img
spot_imgspot_img

ಬೈಂದೂರು: ಸಮುದ್ರದಲ್ಲಿ ಮುಳುಗಿ ಯುವಕ ಸಾವು

- Advertisement -
- Advertisement -
vtv vitla
vtv vitla

ಬೈಂದೂರು: ಸ್ನೇಹಿತರ ಜೊತೆ ಸಮುದ್ರಕ್ಕೆ ಗಾಳಕ್ಕಾಗಿ ತೆರಳಿದ ವೇಳೆ 23 ವರ್ಷ ಪ್ರಾಯದ ಯುವಕ ನೀರುಪಾಲಾದ ಘಟನೆ ತಾಲೂಕಿನ ಸೋಮೇಶ್ವರ ಬಳಿ ಭಾನುವಾರ ಸಂಜೆ ನಡೆದಿದೆ.

ಬೈಂದೂರು ಬಿಜೂರು ಸಮೀಪದ ಬವಳಾಡಿ ನಿವಾಸಿ ಮಂಜುನಾಥ ದೇವಾಡಿಗ ಎಂಬುವವರ ಪುತ್ರ ಶಶಿಧರ್ ದೇವಾಡಿಗ (22) ಮೃತ ದುರ್ದೈವಿ.

vtv vitla
vtv vitla

ಶೆಶಿಧರ್ ಎಂಬ ಯುವಕ ತನ್ನ ನಾಲ್ವರು ಸ್ನೇಹಿತರೊಂದಿಗೆ ಮೀನು ಹಿಡಿಯಲು ಗಾಳಕ್ಕಾಗಿ ತೆರಳಿದ್ದರು. ಈ ಸಂದರ್ಭದಲ್ಲಿ ಅಲೆಗಳ ರಭಸಕ್ಕೆ ನಿಯಂತ್ರಣ ಕಳೆದುಕೊಂಡು ತೆರೆಯೊಂದಿಗೆ ತೆಲೆಹೋಗಿದ್ದಾರೆ. ತನ್ನ ಸ್ನೇಹಿತ ಹಾಗೂ ಮೀನುಗಾರರು ರಕ್ಷಣೆಗೆ ಮುಂದಾದರೂ ಕೂಡ ಶಶಿಧರ್ ಅವರನ್ನು ಬಚಾವ್ ಮಾಡಲು ಸಾಧ್ಯವಾಗಿಲ್ಲ. ಬಡತನದ ಕುಟುಂಬದವರಾದ ಶಶಿಧರ್ ಕಳೆದುಕೊಂಡ ಮನೆಯವರ ಆಕ್ರಂಧನ ಮುಗಿಲು ಮುಟ್ಟಿದೆ.

ಘಟನಾ ಸ್ಥಳಕ್ಕೆ ಬೈಂದೂರು ಸಿಪಿಐ ಸಂತೋಷ್ ಕಾಯ್ಕಿಣಿ ಹಾಗೂ ಠಾಣೆಯವರು ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!