Thursday, August 6, 2026
spot_imgspot_img
spot_imgspot_img

ವಿಟ್ಲ: VITTAL MEDIA CENTER (ಡಿಜಿಟಲ್ ಸೇವಾ ಕೇಂದ್ರ) ಉದ್ಘಾಟನೆ; ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ ರವರಿಗೆ ಸನ್ಮಾನ

- Advertisement -
- Advertisement -

ವಿಟ್ಲ: ವಿಟ್ಲದ ಪೊಲೀಸ್ ಠಾಣಾ ಮುಂಭಾಗದ ಕಟ್ಟಡದಲ್ಲಿ ಪ್ರಾರಂಭಿಸಲಾದ ನೂತನ VITTAL MEDIA CENTER(ಡಿಜಿಟಲ್ ಸೇವಾ ಕೇಂದ್ರ) ಉದ್ಘಾಟನೆಗೊಂಡಿತು.

ಮುಹಮ್ಮದುಲ್ ಫೈಝೀ ವಾಲೆಮುಂಡೋವ್ ಉಸ್ತಾದ್ ಅವರು ಅವರು ನೂತನ ಕಚೇರಿಯನ್ನು ಉದ್ಘಾಟಿಸಿದರು. ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬು ಮಹಮ್ಮದಾಲಿ ಫೈಝಿ ಇರ್ಫಾನಿ, ಟೌನ್ ಮಸೀದಿ ಖತೀಬು ಅಬ್ಬಾಸ್ ಮದನಿ ಭಾಗವಹಿಸಿದ್ದರು.

vtv vitla
vtv vitla

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಮಾಜಿ ಸಚಿವ ಬಿ ರಮಾನಾಥ ರೈ, ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಾಬು ಕೆ.ವಿ, ಎಂ ಫ್ರೆಂಡ್ಸ ಸ್ಥಾಪಕಾಧ್ಯಕ್ಷ ರಶೀದ್ ವಿಟ್ಲ, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಅಣ್ಣಪ್ಪ ಸಾಸ್ತಾನ, ನ್ಯಾಯವಾದಿ ನಟೇಶ ವಿಟ್ಲ, ಹಮೀದ್ ಹಾಜಿ ಕೊಡಂಗಾಯಿ, ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ನಾಗರಾಜ್ ಎಚ್ ಇ, ಅಬೂಬಕ್ಕರ್ ಅನಿಲಕಟ್ಟೆ, ಶಮೀರ್ ಪಳಿಕೆ, ರಶೀದ್ ಡಿ.ಎಂ, ಇಸಾಕ್ ವಿಟ್ಲ ಮೊದಲಾದವರು ಭಾಗವಹಿಸಿದ್ದರು.

- Advertisement -

Related news

error: Content is protected !!