Wednesday, October 28, 2026
spot_imgspot_img
spot_imgspot_img

ಅಂತಿಮ ದಿನದ ಹೋಳಿಯಾಟದಲ್ಲಿ ರಕ್ತದೋಕುಳಿ: ಇಬ್ಬರಿಗೆ ಚೂರಿ ಇರಿತ..!

- Advertisement -
- Advertisement -

ಊರಲ್ಲಿನ ಅಂತಿಮ ದಿನದಂದು ನಡೆದ ಹೋಳಿಯಾಟ ಅಕ್ಷರಶಃ ರಕ್ತದೋಕುಳಿ ಎಂಬಂತಾಗಿದೆ. ಹೋಳಿಯಾಟದಲ್ಲಿ ತೊಡಗಿದ್ದ ಇಬ್ಬರಿಗೆ ಚೂರಿ ಇರಿಯಲಾಗಿದ್ದು, ತೀವ್ರ ರಕ್ತಸ್ರಾವವಾಗಿದೆ.

ಬಾಗಲಕೋಟೆಯಲ್ಲಿ ಮೂರು ದಿನ ಹೋಳಿ ಹಬ್ಬ ಆಚರಣೆ ಇದ್ದು, ಇಂದು ಮೂರನೇ ದಿನ ಹೋಳಿ ಆಡುವ ಸಂದರ್ಭ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ.
ಬಣ್ಣ ಎರಚುವ ವಿಚಾರದಲ್ಲಿ ಉಂಟಾದ ಗಲಾಟೆ ಹಲ್ಲೆಯವರೆಗೂ ತಲುಪಿದೆ.

ಹೋಳಿಯಾಡುತ್ತಿದ್ದ ಅವಿನಾಶ್ (24) ಮತ್ತು ಬಸವರಾಜ (22) ಘರ್ಷಣೆ ವೇಳೆ ಚೂರಿ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅದರಲ್ಲೂ ಅವಿನಾಶ್ ತುಟಿ ಹಾಗೂ ಕಣ್ಣಿನ ಭಾಗಕ್ಕೆ ಚೂರಿಯಿಂದ ಇರಿದಿದ್ದರೆ, ಬಸವರಾಜನ ಕೆನ್ನೆಗೆ ಚಾಕುವಿನಿಂದ ಗಾಯಗೊಳಿಸಲಾಗಿದೆ. ಗಾಯಾಳುಗಳನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಗಲಕೋಟೆ ಮಡುವಿನ ಓಣಿ ಬಳಿ ಘಟನೆ ಸಂಭವಿಸಿದ್ದು, ಬಾಗಲಕೋಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!