Wednesday, September 23, 2026
spot_imgspot_img
spot_imgspot_img

ಉಡುಪಿ: ಕೋಳಿ ಕೇಳುವ ನೆಪದಲ್ಲಿ ಮಹಿಳೆಯ ಚಿನ್ನದ ಕರಿಮಣಿ ಎಗರಿಸಿ ಪರಾರಿಯಾದ ಭೂಪ

- Advertisement -
- Advertisement -

ಹಿರಿಯಡ್ಕ: ಕೋಳಿ ಕೇಳುವ ನೆಪದಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯ ಚಿನ್ನದ ಕರಿಮಣಿ ಸರ ಕಸಿದು ಪರಾರಿಯಾಗಿರುವ ಘಟನೆ ನಡೆದಿದೆ. ಪೆರ್ಡೂರು ಗ್ರಾಮದ ಬಂಗ್ರಬೈಲು ಎಂಬಲ್ಲಿ ನಡೆದಿದೆ .ಕರಿಮಣಿ ಸರ 4 ಪವನ್ ಇದ್ದು, ಸುಮಾರು ರೂ. 1,20000 ಮೌಲ್ಯದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೋಭಾ ಎಂಬ ಮಹಿಳೆಯ ಮನೆಗೆ ಬೈಕಿನಲ್ಲಿ ಬಂದ ವ್ಯಕ್ತಿ ಕೋಳಿ ಇದೆಯೇ ಎಂದು ಕೇಳಿದ್ದು, ತಮ್ಮಲ್ಲಿ ಮಾರಾಟ ಮಾಡುವ ಕೋಳಿ ಇಲ್ಲ ಎಂದು ಹೇಳಿದ ನಂತರ ಆತ ಇನ್ನೆರಡು ಮನೆಯಲ್ಲಿ ಕೋಳಿ ಇದೆಯ ಎಂದು ಕೇಳಿ ಬರುತ್ತೇನೆ ಎಂದು ಹೇಳಿ ಹೋಗಿ ಸ್ವಲ್ಪ ಸಮಯದಲ್ಲಿ ವಾಪಸು ಬಂದು ಎಲ್ಲಿಯೂ ಕೋಳಿ ಸಿಗಲಿಲ್ಲ ಎಂದು ಹೇಳಿ ಮನೆಯ ಪಕ್ಕದಲ್ಲಿದ್ದ ಜಂಬು ನೇರಳೆ ಕಾಯಿಯನ್ನು ಕೊಯ್ಯತ್ತಿದ್ದು, ಆತನಿಗೆ ಪ್ಲಾಸ್ಟಿಕ್ ಕವರ್‌ನ್ನು ನೀಡಿ ಜಂಬು ನೇರಳೆ ಹಣ್ಣನ್ನು ನೋಡುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಆತ ಶೋಭಾರವರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕಸಿದು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

- Advertisement -

Related news

error: Content is protected !!