Monday, October 5, 2026
spot_imgspot_img
spot_imgspot_img

ಕಾಸರಗೋಡು: ಕುಡಿತ ಮತ್ತಿನಲ್ಲಿ ತಂದೆ ಮಗನ ಜಗಳ; ಕೊಲೆಯಲ್ಲಿ ಅಂತ್ಯ

- Advertisement -
- Advertisement -

ಕುಡಿತದ ಅಮಲಿನಲ್ಲಿ ತಂದೆ ಮಗ ಜಗಳವಾಡಿ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ತಂದೆಯನ್ನು ಪುತ್ರ ಕೊಲೆ ಮಾಡಿದ್ದಾನೆ. ಘಟನೆ ಆದೂರು ಸಮೀಪದ ಪಾಂಡಿಯಲ್ಲಿ ಮಂಗಳವಾರ ಬೆಳ್ಳಗ್ಗೆ ನಡೆದಿದೆ. ಮೃತಪಟ್ಟವರನ್ನು ಬಾಲಕೃಷ್ಣ (56) ಎಂದು ಗುರುತಿಸಲಾಗಿದೆ.

ಕೃತ್ಯಕ್ಕೆ ಸಂಬಂಧ ಪಟ್ಟಂತೆ ಪುತ್ರ ನರೇಂದ್ರ ಪ್ರಸಾದ್ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪಾನಮತ್ತರಾಗಿ ಪರಸ್ಪರ ಹೊಡೆ ದಾಡಿಕೊಂಡಿದ್ದು, ಈ ಸಂದರ್ಭದಲ್ಲಿ ಪುತ್ರನ ಹೊಡೆತಕ್ಕೆ ತಂದೆ ಬಲಿಯಾಗಿದ್ದಾರೆ. ಈ ಬಗ್ಗೆ ಆದೂರು ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದಾರೆ.

- Advertisement -

Related news

error: Content is protected !!