Sunday, September 13, 2026
spot_imgspot_img
spot_imgspot_img

ಕಾಸರಗೋಡು: ಹಳೆಯ ಚಿನ್ನಾಭರಣ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ

- Advertisement -
- Advertisement -

ಕಾಸರಗೋಡು: ಕಾರಿನಲ್ಲಿ ಹಳೆಯ ಚಿನ್ನಾಭರಣ ಸಾಗಾಟ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಇಬ್ಬರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1. 3 ಕಿಲೋ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಮಹಾರಾಷ್ಟ್ರ ಮೂಲದ ಗೋರತ್ ಪಾಟೀಲ್ ( 45) ಮತ್ತು ಸದಾಶಿವ ( 42) ಬಂಧಿತರು.

ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಉಪ್ಪಳ ಕೈಕಂಬದಿಂದ ಇವರು ಸಂಚರಿಸುತ್ತಿದ್ದ ಕಾರನ್ನು ವಶಪಡಿಸಿ ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ಎರಡು ಚಿನ್ನದ ಬಿಲ್ಲೆಗಳು ಪತ್ತೆಯಾಗಿವೆ. ಹಳೆಯ ಚಿನ್ನಾಭರಣಗಳನ್ನು ಪಡೆದು ಮಾರಾಟ ಮಾಡುವ ತಂಡದವರಾಗಿರಬಹುದು ಎಂದು ಪೊಲೀಸರು ಸಂಶಯಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!