ಜಯಕರ್ನಾಟಕ ಜನಪರ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಕುಂಬ್ರದ ಜನತಾ ಕಾಲೋನಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ಪ್ರವೀಣ್ ಶೆಟ್ಟಿ ತಿಂಗಳಾಡಿ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈಯುವ ಮೂಲಕ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪ್ರವೀಣ್ ಶೆಟ್ಟಿ ತಿಂಗಳಾಡಿ ಮಾತನಾಡಿ ಭಾರತಕ್ಕೆ ಸಂವಿಧಾನವನ್ನು ನೀಡುವಲ್ಲಿ ಅಂಬೇಡ್ಕರ್ ವಹಿಸಿದ ಶ್ರಮ, ಕೊಡುಗೆ ಅವರ ಸಾಧನೆಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಪ್ರವೀಣ್ ಶೆಟ್ಟಿ ತಿಂಗಳಾಡಿ, ಅಮರ್ ರೈ ದರ್ಬೆ, ಮನೋಜ್ ರೈ ಮಠ, ವಿನೋದ್ ರೈ ಕುಂಬ್ರ ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯರು, ಪ್ರಜ್ವತ್ ರೈ ಮಿತ್ರಂಪಾಡಿ ಹಾಗೂ ಕುಂಬ್ರ ಜನತಾ ಕಾಲೋನಿಯ ಸುಂದರ, ಚೆನ್ನ ಬಿಜಲ, ಅಣ್ಣು, ಮಾಯಿಲ ಕುಂಬ್ರ, ಜಯಂತ ಕುಂಬ್ರ, ನಾರಾಯಣ ಕುಂಬ್ರ, ಚೆನ್ನು ಕುಂಬ್ರ, ಹರೀಶ್ ಕುಂಬ್ರ, ಅವಿನಾಶ್ ಕುಂಬ್ರ, ಅಶ್ವಥ್ ಕುಂಬ್ರ, ಆನಂದ ಕುಂಬ್ರ ಸೇರಿದಂತೆ ಹಿರಿಯರು, ಮಹಿಳೆಯರು, ಮಕ್ಕಳು ಉಪಸ್ಥಿತರಿದ್ದರು.








