Saturday, August 1, 2026
spot_imgspot_img
spot_imgspot_img

ಉಡುಪಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಲಾಡ್ಜ್‌ನಲ್ಲಿ ಮತ್ತೊಂದು ಆತ್ಮಹತ್ಯೆ..!

- Advertisement -
- Advertisement -
vtv vitla
vtv vitla

ಉಡುಪಿ: ಇತ್ತಿಚೆಗಷ್ಟೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಉಡುಪಿಯ ಶಾಂಭವಿ ಲಾಡ್ಜ್‌‌ನಲ್ಲಿ ಮತ್ತೋರ್ವ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪ್ರೇಮ ವೈಫಲ್ಯದಿಂದ ನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಂಗಳೂರು ಕೊಣಾಜೆಯ, ಮೆಡಿಕಲ್ ರೆಪ್ ಶರಣ್ ರಾಜ್ (31) ಆತ್ಮಹತ್ಯೆಗೆ ಶರಣಾದ ಯುವಕ.

ಇನ್ನು ಸಂತೋಷ್ ಆತ್ಮಹತ್ಯೆ ನಂತರ ಎರಡು ದಿನದ ಹಿಂದಷ್ಟೇ ಲಾಡ್ಜಿನ ಹೆಸರು ಬದಲಾಯಿಸಲಾಗಿತ್ತು. ಅಂತೆಯೇ ಹೋಮವೂ ನಡೆದಿತ್ತು. ಲಾಡ್ಜ್ ದ್ವಾರದ ದಿಕ್ಕು ಬದಲಾಯಿಸಲು ಯೋಜಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!