

ಕಲ್ಲಡ್ಕ: ಅತ್ಯುತ್ತಮ ಗುಣಮಟ್ಟದ, ವಾಹನದ ಎಂಜಿನ್ ಕಾರ್ಯದಕ್ಷತೆಯನ್ನು ಹೆಚ್ಚಿಸುವ, ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಉತ್ಪಾದಿಸಿದ ಸೆಲೊಲೈನ್ ಲ್ಯೂಬ್ರಿಕಾಂಟ್ಸ್ ಇಂದು ಕಲ್ಲಡ್ಕದಲ್ಲಿ ಶುಭಾರಂಭಗೊಂಡಿದೆ.

ನಿತಿನ್ ದಾಸ್ ಮಾಲೀಕತ್ವದ ಈ ಸಂಸ್ಥೆಯ ಉದ್ಘಾಟನೆಯನ್ನು ಜಯಶ್ರೀ ಬಾರ್ & ರೆಸ್ಟೋರೆಂಟ್ ಕಲ್ಲಡ್ಕ, ಪ್ರೀತಿ ಬೀಡಿ ಇದರ ಮಾಲೀಕ ಶಾಂತರಾಮ ಶೆಟ್ಟಿ ನೆರವೇರಿಸಿದರು. ಸಂಸ್ಥೆಯ ಲೋಗೋ ಅನಾವರಣವನ್ನು ಐಕಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿ. ಇದರ ಉಸ್ಮಾನ್ ಶೆರಿಫ್, ಹಾಗೂ ಓಮ್ ಇಂಡಸ್ಟ್ರೀಸ್ ಮಂಗಳೂರು ಮತ್ತು ಹೆಗ್ಡೆ ಇಂಡಸ್ಟ್ರೀಸ್ ಬೆಂಗಳೂರು ಇದರ ಮಾಲಿಕರಾದ ದಿನೇಶ್ ಹೆಗ್ಡೆ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಆಫ್ ಬರೋಡಾದ ಕಿನ್ನಿಗೋಳಿ ಬ್ರಾಂಚ್ ಮ್ಯಾನೇಜರ್ ಪ್ರಣಮ್ ಕುಮಾರ್, ಬ್ಯಾಂಕ್ ಆಫ್ ಬರೋಡ ಕಲ್ಲಡ್ಕ ಇಲ್ಲಿನ ಬ್ರಾಂಚ್ ಮ್ಯಾನೇಜರ್ ಸದಾಶಿವ, ಅರ್ಚಕ ನಿತ್ಯಾನಂದ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂಸ್ಥೆಗೆ ಶುಭ ಹಾರೈಸಿದರು. ಕಾರ್ಯಕ್ರಮವನ್ನು ವಿಜೆ ಡಿಕ್ಸನ್ ನಿರೂಪಿಸಿದರು.

ನಿತಿನ್ ದಾಸ್ ಇವರ ಮಾಲೀಕತ್ವದ ಎನ್ ಕೆ ಟೈಯರ್ಸ್ ಕಲ್ಲಡ್ಕ , ವಿಜೆ ಎಂಟರ್ ಪ್ರೈಸಸ್ ಕಲ್ಲಡ್ಕ, ಫ್ರೆಂಡ್ಸ್ ಅಟೋಮೊಬೈಲ್ಸ್ ವಿಟ್ಲ ಅತ್ಯುತ್ತಮ ಸೇವೆ ನೀಡುತ್ತಿದೆ. ಇನ್ನು ಸೆಲೊಲೈನ್ ಲ್ಯೂಬ್ರಿಕಾಂಟ್ಸ್ ಕೂಡ ತನ್ನ ಅತ್ಯುತ್ತಮ ಸೇವೆ ನೀಡಿ ಗ್ರಾಹಕರಿಗೆ ಸಂತೃಪ್ತಿ ನೀಡಲಿದೆ.










