

ದಯಾ ಕ್ರಯೇಷನ್ ಅರ್ಪಿಸುವ “ಸ್ಫೂರ್ತಿದ ಕಡಲ್ ಅಮ್ಮ” ತುಳು ಅಲ್ಬಮ್ ಸಾಂಗ್ ಕಾರ್ಯಕ್ರಮ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ನಡೆಯಿತು.
ದಯಾ ಕ್ರಿಯೇಷನ್ ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡ ಈ ಆಲ್ಬಮ್ ಹಾಡನ್ನು ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ಕೃಷ್ಣ ಗುರೂಜಿ ಹಾಗೂ ವಿಟಿವಿ ವಿಟ್ಲ ಚಾನೆಲ್ ನಿರ್ದೇಶಕರಾದ ರಾಮ್‌ದಾಸ್ ಶೆಟ್ಟಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಧರ್ಮದರ್ಶಿಯವರು “ಸ್ಫೂರ್ತಿದ ಕಡಲ್ ಅಮ್ಮ” ಈ ಆಲ್ಬಮ್ ಸಾಂಗ್ ತಂಡದ ಎಲ್ಲರ ಪ್ರಯತ್ನದಿಂದ ಈ ಹಾಡು ತುಂಬಾ ಸೊಗಸಾಗಿ ಮೂಡಿಬಂದಿದೆ, . ಇನ್ನು ಮುಂದೆಯೂ ಕಲಾಮಾತೆಯ ಸೇವೆ ಮಾಡುವ ಭಾಗ್ಯ ಕರುಣಿಸಲಿ ಎಂದು ತಂಡದ ಎಲ್ಲರಿಗೂ ಶುಭಹಾರೈಸಿದ್ರು.
ವಿಟಿವಿ ವಿಟ್ಲ ಚಾನೆಲ್ ನಿರ್ದೇಶಕರಾದ ರಾಮ್‌ದಾಸ್ ಶೆಟ್ಟಿ ವಿಟ್ಲ ಮಾತನಾಡಿ “ಸ್ಫೂರ್ತಿದ ಕಡಲ್ ಅಮ್ಮ” ತಂಡಕ್ಕೆ ಶುಭಾಶಯ ತಿಳಿಸಿದರು. ಕಾರ್ಯಕ್ರಮದಲ್ಲಿ ವಿಟಿವಿ ಚಾನೆಲ್‌ನ ಸಿಬ್ಬಂಧಿಗಳಾದ ದಿನೇಶ್, ಶಶಿತ್ ರೈ, ಶಶಿಕಲಾ, “ಸ್ಫೂರ್ತಿದ ಕಡಲ್ ಅಮ್ಮ” ಆಲ್ಬಮ್ ಸಾಂಗ್ ನ ಗಾಯಕಿ ಅಶ್ವಿನಿ ಪೆರುವಾಯಿ, ಲವನಂದ, ದಯಾನಂದ ಅಮೀನ್ ಬಾಯರ್ , ರವಿ ಕುಕ್ಕಾಜೆ, ಮೊದಲಾದವರು ಉಪಸ್ಥಿತರಿದ್ದರು.








