Tuesday, September 22, 2026
spot_imgspot_img
spot_imgspot_img

ಕಾರ್ಕಳ: ಸೀರೆಗೆ ಬೆಂಕಿ ತಾಗಿ ಗಂಭೀರ ಗಾಯಗೊಂಡಿದ್ದ ವೃದ್ದೆ ಮೃತ್ಯು

- Advertisement -
- Advertisement -

ಕಾರ್ಕಳ: ಕಟ್ಟಿಗೆ ಒಲೆಯಲ್ಲಿ ತಿಂಡಿ ಮಾಡುತ್ತಿರುವಾಗ ಆಕಸ್ಮಿಕವಾಗಿ ಒಲೆಯ ಬೆಂಕಿ ಸೀರೆಯ ಸೆರಗಿಗೆ ತಾಗಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡ ವೃದ್ದೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟ ಘಟನೆ ಕಾರ್ಕಳದಲ್ಲಿ ನಡೆದಿದೆ.

ಸಾಣೂರು ಕುಜಮಾರು ಮನೆಯ ಸುಮತಿ ಶೆಟ್ಟಿ(71) ಮೃತಪಟ್ಟವರು.

ಮನೆಯೊಳಗಿನಿಂದ ತಾಯಿಯ ಬೊಬ್ಬೆ ಕೇಳಿ ತೋಟದಲ್ಲಿದ್ದ ಅವರ ಮಗ ದೀಲಿಪ್ ಶೆಟ್ಟಿ ಅಡುಗೆ ಕೋಣೆಗೆ ಓಡಿ ಬಂದು, ಸೀರೆಗೆ ನೀರು ಹಾಕಿ ಬೆಂಕಿ ನಂದಿಸಿದರು. ಗಾಯಾಳುವನ್ನು ಮೂಡಬಿದ್ರಿ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಡೆದು ಗುಣಮುಖವಾಗಿ ಮನೆಗೆ ಬಂದಿದ್ದ ಸುಮತಿ ಶೆಟ್ಟಿ ಅವರ ದೇಹದಲ್ಲಿ ಗಾಯ ಮತ್ತಷ್ಟು ಉಲ್ಬಣಿಸಿಕೊಂಡಿತು. ಹೀಗಾಗಿ ಮತ್ತೆ ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದದಾಗ ಅವರ ಆರೋಗ್ಯ ಸ್ಥಿತಿ ಏರುಪೇರಾಗಿರುವುದರಿಂದ ಅಲ್ಲಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೇ 7ರಂದು ಮಧ್ಯಾಹ್ನ 12:15ರ ವೇಳೆಗೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ದೃಢ ಪಡಿಸಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ.

- Advertisement -

Related news

error: Content is protected !!