Monday, June 22, 2026
spot_imgspot_img
spot_imgspot_img

ವಿಟ್ಲ: ದ.ಕ ಗ್ಯಾರೇಜ್‌ ಮ್ಹಾಲಕರ ಸಂಘ, ವಿಟ್ಲ ವಲಯದ ವಾರ್ಷಿಕೋತ್ಸವ ಮತ್ತು ರಕ್ತದಾನ ಶಿಬಿರ

- Advertisement -
- Advertisement -

ವಿಟ್ಲ: ದಕ್ಷಿಣ ಕನ್ನಡ ಗ್ಯಾರೇಜ್‌ ಮ್ಹಾಲಕರ ಸಂಘ (ರಿ ) ಮಂಗಳೂರು (ದ.ಕ., ಮತ್ತು ಉಡುಪಿ ಜಿಲ್ಲೆ) ವಿಟ್ಲ ವಲಯದ ವಾರ್ಷಿಕೋತ್ಸವ ಮತ್ತು ರಕ್ತದಾನ ಶಿಬಿರ ಭಾರತ್ ಅಡಿಟೋರಿಯಂ ಚಂದಳಿಕೆಯಲ್ಲಿ ನಡೆಯಿತು.

ಸಭಾಧ್ಯಕ್ಷತೆಯನ್ನು ದ.ಕ. ಗ್ಯಾರೇಜ್‌ ಮಾಲಕರ ಸಂಘದ ಅಧ್ಯಕ್ಷ ಬಿ. ಕೆ. ಬಾಬು ವಹಿಸಿದ್ದರು. ದೀಪ ಪ್ರಜ್ವಲನೆಯನ್ನು ರಾಮನಾಥ್ ಎಂಟ‌ರ್ ಪ್ರೈಸಸ್, ಸರ್ವೋ ಸ್ಟಾಸ್ಟ್ ಮಂಗಳೂರು ಇದರ ಪ್ರಸನ್ನ ಕೆ. ಆರ್, ಓಶೀಮ ಸಿಸ್ಟಮ್ಸ್ ಪ್ರೈ. ಲಿ. ನ ಚೇರ್‌ ಮೇನ್ ಹಾಗೂ ಮೆನೇಜಿಂಗ್ ಡೈರೆಕ್ಟರ್ ಕೂಡೂರು ರಾಮಚಂದ್ರ ಭಟ್ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಪುಂಡಲೀಕ ಸುವರ್ಣ ಚೇರ್‌ ಮ್ಯಾನ್, ದ.ಕ. ಗ್ಯಾರೇಜ್ ಮಾಲಕರ ಸಂಘ, ಮಂಗಳೂರು, ದಿನೇಶ್ ಕುಮಾರ್ ಅಧ್ಯಕ್ಷರು, ದ.ಕ. ಗ್ಯಾರೇಜ್ ಮಾಲಕರ ಸಂಘ, ಮಂಗಳೂರು, ಸುಭಾಶ್ಚಂದ್ರ ನಾಯಕ್‌ ಉದ್ಯಮಿಗಳು ಹಾಗೂ ಅಧ್ಯಕ್ಷರು, ಜೆ.ಎಸ್.ಬಿ, ಸಮಾಜ ವಿಟ್ಲ, ಸಂಜೀವ ಪೂಜಾರಿ ಉದ್ಯಮಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು, ವಿಟ್ಲ, ಪುರುಷೋತ್ತಮ ಕಮಿಲ ಪ್ರಧಾನ ಕಾರ್ಯದರ್ಶಿ, ದ.ಕ, ಗ್ಯಾರೇಜ್‌, ಪಂಕಜ್ ಕುಮಾರ್, ಡಾ. ಕೆಎಂಸಿ ವಾಣಿ, ಪಂಕಜ್ ಕುಮಾರ್‌, ವಿಜಯಕುಮಾರ್ ಭಂಡಾರಿ ಹೆಬ್ಬಾರ ಬೈಲು ಆಗಮಿಸಿದ್ದರು.

ಈ ವೇಳೆ ಪುಂಡಲೀಕ ಸುವರ್ಣ ಮಂಗಳೂರು, ಗೋಪಾಲಕೃಷ್ಣ ಆಚಾರ್ಯ ಮಂಗಳೂರು, ಲಕ್ಷ್ಮಣ ಪೂಜಾರಿ, ಆರ್. ಎಸ್. ನಿಕಟ ಪೂರ್ವ ಅಧ್ಯಕ್ಷರು ದ.ಕ. ಗ್ಯಾರೇಜ್ ಮ್ಹಾಲಕರ ಸಂಘ, ವಿಟ್ಲ ವಲಯ, ಸುರೇಶ ಆಚಾರ್ಯ ಗಲಪದವು, ವಿಠಲ ಶೆಟ್ಟಿ – ರಿಕ್ಷಾ ಚಾಲಕರು, ಇಸುಬು ಮೇಗಿನಪೇಟೆ ಚಾಲಕರು ಇವರನ್ನು ಸನ್ಮಾನಿಸಲಾಯಿತು.

ಈ ವೇಳೆ ದ.ಕ ಗ್ಯಾರೇಜ್ ಮಾಲಕರ ಸಂಘ, ವಿಟ್ಲ ವಲಯದ ಗೌರವಾಧಯಕ್ಷ ಹರೀಶ್ ಆಚಾರ್ಯ ವಿ, ಕಾರ್ಯದರ್ಶಿ ರಾಜಶೇಖರ್ ಬಿ, ಉಪಾಧ್ಯಕ್ಷ ವೆಂಕಟ್ರಮಣ ಭಟ್‌, ಪುರುಷೋತ್ತಮ ಎಂ, ಕೋಶಾಧಿಕಾರಿ ಲಿಯೋ ಡಿ ಲಸ್ರಾದೋ, ಸಂಚಾಲಕ ಉಮ್ಮರ್ ಕೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಪ್ರಣಮ್, ಮೊನಿಷ್, ತೃಷಾ ಪ್ರಾರ್ಥನೆಗೈದರು. ಚಂದ್ರಶೇಖರ್ ಭಟ್‌ ಪಡಾರ್ ಪ್ರಾಸ್ತವಿಕ ಹಾಗೂ ಲೆಕ್ಕ ಪತ್ರ ಮಂಡನೆ, ಸುಂದರ ಆಚಾರ್ಯ ನೆಗಳಗುಳಿ ಸ್ವಾಗತಿಸಿ, ರಾಜಶೇಖರ್ ಬಿ ಧನ್ಯವಾದಗೈದರು.

- Advertisement -

Related news

error: Content is protected !!