ಪೊಲೀಸ್ ಠಾಣೆಯಲ್ಲಿ ಹ್ಯಾಂಗರ್ನಲ್ಲಿ ನೇತು ಹಾಕಿದ್ದ ಪೊಲೀಸ್ ಯೂನಿಫಾರ್ಮ್ ಒಳಗೆ ನಾಗರಹಾವು ಹೋಗಿ ಬೆಚ್ಚನೆ ಕೂತ ಘಟನೆ ನಡೆದಿದೆ. ಬಿಹಾರದ ಸರನ್ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಮಹಿಳಾ ಪೊಲೀಸ್ ಅಧಿಕಾರಿ ಶರ್ಟ್ ಹ್ಯಾಂಗರ್ನಲ್ಲಿ ನೇತು ಹಾಕಿದ್ದರು. ಎಂದಿನಂತೆ ಅವರು ತಮ್ಮ ಶರ್ಟ್ ಧರಿಸಲು ಹೋದಾಗ ಆ ಹಾವು ಒಮ್ಮಿಂದೊಮ್ಮೆಲೆ ಹೆಡೆ ಎತ್ತಿಕೊಂಡು ಬುಸುಗುಟ್ಟಿದೆ.
ಪೊಲೀಸರು ಹಾವಿನ ಉಗ್ರಾವತಾರ ನೋಡಿ ಮಹಿಳಾ ಪೊಲೀಸ್ ಹೌಹಾರಿದ್ದಾರೆ. ಕೊನೆಗೆ ಹಾವು ಹಿಡಿಯುವರನ್ನ ಕರೆಸಿ, ಆ ಹಾವನ್ನ ಸುರಕ್ಷಿತವಾಗಿ ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ. ಹಾವನ್ನ ಭದ್ರವಾಗಿ ತೆಗೆದುಕೊಂಡು ಹೋಗಿ ಈಗ ಸುರಕ್ಷಿತವಾದ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.
ಮಳೆಗಾಲದಲ್ಲಿ ಇಲ್ಲಿನ ಪಹ್ಲೇಜಾ ಘಾಟ್ನಿಂದ ಸೋನ್ಪುರ ರಸ್ತೆ ಮಾರ್ಗದವರೆಗಿನ ರೈಲು ಮಾರ್ಗ ಹಾಗೂ ರಸ್ತೆಬದಿಯಲ್ಲಿರುವ ಪೊದೆಗಳಲ್ಲಿ ವಿಷಪೂರಿತ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ. ಅಂತಹ ಹಾವುಗಳಲ್ಲಿ ಒಂದಾದ ಹಾವು ಈ ಪೊಲೀಸ್ಠಾಣೆಗೆ ಬಂದು ಪೊಲೀಸ್ ಯೂನಿಫಾರ್ಮ್ ಒಳಗೆ ಬೆಚ್ಚನೆ ಕೂತಿದೆ. ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.