Thursday, September 17, 2026
spot_imgspot_img
spot_imgspot_img

ಪೆರ್ಡೂರು: ಅಕ್ರಮವಾಗಿ ಗಾಂಜಾ ಸಾಗಾಟ; 6 ಲಕ್ಷ ರೂ.ಮೌಲ್ಯದ ಗಾಂಜಾ ಸಹಿತ ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

- Advertisement -
- Advertisement -

ಪೆರ್ಡೂರು: ಪೆರ್ಡೂರು ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ಕಾರಿನಲ್ಲಿ (ಆಗುಂಬೆ ಹೆಬ್ರಿ ಕಡೆಯಿಂದ ಬರುತ್ತಿದ್ದ ಅಕ್ರಮವಾಗಿ ಸಾಗಿಸುತ್ತಿದ್ದ 6 ಲಕ್ಷ ರೂ. ಮೌಲ್ಯದ 20 ಕೆ.ಜಿ. ಗಾಂಜಾ ಸಹಿತ ಮೂವರು ಆರೋಪಿಗಳನ್ನು ಶನಿವಾರ ಸೆನ್ ಅಪರಾಧ ಪೊಲೀಸರ ತಂಡ ಬಂಧಿಸಿದೆ.

ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ಮಂಜುನಾಥ್ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳೆಲ್ಲರೂ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದಾರೆ.

ಹರಾವರಿ ಕಟ್ಟಿನಮನೆ ನಿವಾಸಿ ವಿಜಯಕುಮಾರ್ .ಎಸ್ (23), ಎನ್‌ಆರ್‌ಪುರ ನಿವಾಸಿ ನಿಕ್ಷೇಪ್ ಎಸ್. ವಿ (24), ಕೊಪ್ಪ, ಗುಣವಂತೆ ನಿವಾಸಿ ನಿತೇಶ್ ಕುಮಾರ್ (22) ಬಂಧಿತ ಆರೋಪಿಗಳು.

ಆರೋಪಿಗಳ ವಶದಲ್ಲಿದ್ದ ಪರವಾನಿಗೆ ಇಲ್ಲದೆ, ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 20 ಕಿಲೋ 614 ಗ್ರಾಂ ತೂಕದ ಗಾಂಜಾ. ಇದರ ಅಂದಾಜು ಮೌಲ್ಯ 6,09,000 ರೂ., ಗಿರಾಕಿ ಕುದುರಿಸಲು ಬಳಸುವ 3 ಮೊಬೈಲ್ ಹ್ಯಾಂಡ್ ಸೆಟ್‌ಗಳು, 9 ಲಕ್ಷ ರೂ., ಮೌಲ್ಯದ ಟೊಯೊಟಾ ಗ್ಲಾಸ್ಟಾ ಕಾರು, 6 ಸಾವಿರ ರೂ., ನಗದು ಹಣ ಸೇರಿದಂತೆ ಒಟ್ಟು 15,30,000 ರೂ. ಮೌಲ್ಯದ ಸ್ವತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

- Advertisement -

Related news

error: Content is protected !!