Tuesday, September 15, 2026
spot_imgspot_img
spot_imgspot_img

ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಹೊಟೇಲ್ ಗೆ ನುಗ್ಗಿದ ಕಾರು; ಅಪಾರ ಹಾನಿ

- Advertisement -
- Advertisement -

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಸರ್ವೀಸ್ ರಸ್ತೆಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೊಟೇಲ್ ಗೆ ನುಗ್ಗಿದ್ದು, ಇಬ್ಬರು ಗಾಯಗೊಂಡ ಘಟನೆ ಗುರುವಾರ ಸಂಜೆ ಸಂಭವಿಸಿದೆ.

ಮಹೀಂದ್ರಾ ಎಕ್ಸ್ ಯು ವಿ ಕಾರು ಉಡುಪಿ ಕಡೆಯಿಂದ ಬಂಟಕಲ್ಲುಗೆ ತೆರಳುವ ವೇಳೆ ಕಟಪಾಡಿ ಸರ್ವೀಸ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಕಾರಿಗೆ ಢಿಕ್ಕಿ ಹೊಡೆದು, ರಸ್ತೆಯ ಬದಿಯಲ್ಲಿದ್ದ ಹೋಟಿಗೆ ನುಗ್ಗಿದೆ. ಪರಿಣಾಮ ಹೋಟೆಲಿನ ಓರ್ವ ಸಿಬ್ಬಂದಿ ಹಾಗು ಇನ್ನೋರ್ವರಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಢಿಕ್ಕಿಯ ರಭಸಕ್ಕೆ ಎರಡು ಕಾರುಗಳು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ರಾಯಲ್ ಹಟ್ ಹೊಟೇಲಿಗೆ ಅಪಾರ ನಷ್ಟ ಉಂಟಾಗಿದೆ. ಕಾಪು ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಇನ್ನಷ್ಟೇ ಪ್ರಕರಣ ದಾಖಲಾಗಬೇಕಿದೆ.

- Advertisement -

Related news

error: Content is protected !!