- Advertisement -
- Advertisement -
ದಾವಣಗೆರೆ: ಆ್ಯಪ್‌ವೊಂದರ ಮೂಲಕ ಪರಿಚಯ ಮಾಡಿಕೊಂಡು ಅಮಾಯಕರಿಗೆ ವಂಚಿಸಿ ದರೋಡೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ದಾವಣಗೆರೆ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು 2 ಮೊಬೈಲ್, ಆಟೋ ಜಪ್ತಿ ಮಾಡಿಕೊಂಡಿದ್ದಾರೆ.

ಗ್ಯಾಂಗ್ ಗ್ರೇಂಡರ್ಗೇ ಆಪ್ ಮೂಲಕ ಅಮಾಯಕರನ್ನು ವಂಚಿಸಿ ದರೋಡೆ ಮಾಡುತ್ತಿತ್ತು. ಗ್ಯಾಂಗ್ ಅಮಾಯಕರನ್ನು ನಿರ್ಜನ ಪ್ರದೇಶಕ್ಕೆ ಕರೆಸಿ ಅವರಿಂದ ಹಣ ಒಡವೆ ಕಸಿದುಕೊಳ್ಳುತ್ತಿತ್ತು.

ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಗ್ಯಾಂಗ್ನ ಇಬ್ಬರು ಸದಸ್ಯರನ್ನು ಬಂಧಿಸಿದ್ದು, ಇಂತಹ ಸದಸ್ಯರಿಗೆ ಆಶ್ರಯ ನೀಡಿ ಅವರು ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಿದ್ದ ಆರೋಪದ ಮೇಲೆ ಕೆಆರ್ಎಸ್ ಪಕ್ಷದ ಜಿಲ್ಲಾದ್ಯಕ್ಷ ಮಾಲತೇಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಪೊಲೀಸರು ಮಾಲತೇಶ್ನನ್ನು ವಿಚಾರಣೆ ನಡೆಸುತ್ತಿದ್ದಾರೆ.

- Advertisement -








