Monday, June 22, 2026
spot_imgspot_img
spot_imgspot_img

ಕುಂದಾಪುರ; ಬೀಚ್‌ನಲ್ಲಿ ಗಾಂಜಾ ಸೇವನೆ; ಆರು ಮಂದಿ ಅಂದರ್

- Advertisement -
- Advertisement -

ಕುಂದಾಪುರ: ತ್ರಾಸಿ ಪ್ರವಾಸಿ ಮಂದಿರದ ಬಳಿ ಬೀಚ್‌ನಲ್ಲಿ ಗಾಂಜಾ ಸೇವಿಸಿದ ಆರು ಯುವಕರನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಆಶಿಶ್, ಅಕ್ಷಿತ್, ನಿಯಾಝ್, ಹರ್ಷವರ್ಧನ್, ವಿಶಾಲ್ ಹಾಗೂ ಆದಿತ್ಯ ಬರಂಬೆ ಪೊಲೀಸರು ವಶಕ್ಕೆ ಪಡೆದ ಆರೋಪಿಗಳು.

ಇವರು ಬೀಚ್ ನಲ್ಲಿ ಅಮಲು ಪದಾರ್ಥ ಸೇವಿಸಿದಂತೆ ಕಂಡುಬಂದಿದ್ದು, ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ವೈದ್ಯಕೀಯ ವರದಿಯಲ್ಲಿ ಆರು ಮಂದಿ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!