Sunday, July 26, 2026
spot_imgspot_img
spot_imgspot_img

ಮಂಗಳೂರು: ಐಜಿಪಿ ದೇವಜ್ಯೋತಿ ರೇ ರವರಿಂದ ಎರಡು ವಾರಗಳ ಡ್ರೋನ್ ತರಬೇತಿ ಉದ್ಘಾಟನೆ

- Advertisement -
- Advertisement -

ಮಂಗಳೂರು: ಪಶ್ಚಿಮ ವಲಯದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆ ಮತ್ತುಮಂಗಳೂರು ಪೊಲೀಸ್ ಕಮೀಷನರೇಟ್ ಘಟಕದ ಒಟ್ಟು 27 ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪಶ್ಚಿಮ ವಲಯ ಮಂಗಳೂರು ಮತ್ತು ಆಂತರಿಕ ಭದ್ರತಾ ವಿಭಾಗ ಬೆಂಗಳೂರು ರವರ ಸಹಯೋಗದೊಂದಿಗೆ ಹಮ್ಮಿಕೊಂಡಿರುವ 2 ವಾರಗಳ Unmanned Aerial Vehicle (UAV/Drone) ತರಬೇತಿಯನ್ನು ಆ.29 ರಂದು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ. ಐಪಿಎಸ್ ರವರು ಉದ್ಘಾಟಿಸಿದರು.

ಪೊಲೀಸ್ ಅಧಿಕಾರಿಗಳಿಗೆ ಈ ತರಬೇತಿಯನ್ನು ದೇಶದಲ್ಲಿಯೇ ಕರ್ನಾಟಕ ರಾಜ್ಯವು ಮೊದಲನೆಯದಾಗಿ ಹಮ್ಮಿಕೊಂಡಿದ್ದು, ರಾಜ್ಯದಲ್ಲಿ ಪ್ರಥಮವಾಗಿ ಪಶ್ಚಿಮ ವಲಯದ ಜಿಲ್ಲೆಯ ಅಧಿಕಾರಿ ಸಿಬ್ಬಂದಿಗಳಿಗೆ ಅಂತರಿಕ ಭದ್ರತಾ ವಿಭಾಗ ಬೆಂಗಳೂರಿನ ತಜ್ಞರ ತಂಡವು ತರಬೇತಿಯನ್ನು ನೀಡುತ್ತಿದೆ.

ಡ್ರೋನ್ ಕುರಿತಾದ, ವಿವರಗಳು ಮತ್ತು ಕಾನೂನುಗಳು ಅಲ್ಲದೇ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ UAV/Drone ನ ಮತ್ತು ಅದರ ಪರಿಕರಗಳ ಉಪಯೋಗ ಮತ್ತು ಡೋನ್ ಆಪರೇಟ್ ಮಾಡುವ ಬಗ್ಗೆ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರಿಗೆ ತರಬೇತಿಯನ್ನು ನೀಡಲಾಗುತ್ತಿದೆ.

ರಾತ್ರಿ ಸಮಯದಲ್ಲಿ ಸೂಕ್ಷ್ಮ ಪ್ರದೇಶ, ಕಾಡು ಬೆಟ್ಟ-ಗುಡ್ಡ ಪ್ರದೇಶಗಳಲ್ಲಿ ಕೂಡ JAV/Drone ಅನ್ನು ಹಾರಿಸಿ ಮಾಹಿತಿ ಸಂಗ್ರಹಣೆಯ ಬಗ್ಗೆಯೂ ಸಹ ತರಬೇತಿಯನ್ನು ನೀಡಲಾಗುತ್ತಿದೆ.

- Advertisement -

Related news

error: Content is protected !!