Tuesday, August 11, 2026
spot_imgspot_img
spot_imgspot_img

ವಿಟ್ಲ: ಬಿಎಂಎಸ್ (ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಭಾರತೀಯ ಮಜ್ದೂರ್) ಸಂಘ ವಿಟ್ಲ ಇದರ ನೂತನ ಕಚೇರಿ ಸ್ಥಳಾಂತರಗೊಂಡು ಶುಭಾರಂಭ

- Advertisement -
- Advertisement -

ವಿಟ್ಲ: ಬಿಎಂಎಸ್ ( ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಭಾರತೀಯ ಮಜ್ದೂರ್) ಸಂಘ ವಿಟ್ಲ ಇದರ ನೂತನ ಕಚೇರಿ ಗಣೇಶ ಚತುರ್ಥಿಯ ದಿನದಂದು ಈ‌ ಮೊದಲು‌ ಇದ್ದ ಕಾರ್ಯಾಲಯದ ಪಕ್ಕದ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.

ನೂತನ ಕಚೇರಿಯನ್ನು ವಿಟ್ಲ ಅರಮನೆಯ ಜಯರಾಮ್ ಬಲ್ಲಾಳ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ, ಬಿಎಂಎಸ್ ತಾಲೂಕು ಸಮಿತಿ ವಿಟ್ಲದ ಅಧ್ಯಕ್ಷ ರಾಜೇಶ್ ವಿ ಬೊಬ್ಬೇಕೆರಿ, ಉಪಾಧ್ಯಕ್ಷ ನಾಗೇಶ್ ಸುವರ್ಣ, ಕಾರ್ಯದರ್ಶಿ ಸಂದೇಶ್ ಕೆಲಿಂಜ, ಮತ್ತು ಜೊತೆ ಕಾರ್ಯದರ್ಶಿ ಸಂತೋಷ್ ಕೆಲಿಂಜ, ಪುಷ್ಪರಾಜ್ ಕಲ್ಮಲೆ, ಮತ್ತು ವಿಟ್ಲ ಕಾರ್ಯಲಯ ಕಾರ್ಯದರ್ಶಿಯಾದ ಪ್ರೀತಮ್ ಗೌಡ ದೇವಸ್ಯ, ಹಾಗೂ ದ. ಕ. ಜಿಲ್ಲಾ ಜೊತೆ ಕಾರ್ಯದರ್ಶಿಯಾದ ಅನಂತೇಶ್ವರ್ ಕೆಲಿಂಜ ಮತ್ತು ಕಾರ್ಯಕಾರಿಣಿ ಸಮಿತಿಯ ಸತೀಶ್ ಗೋಳ್ತಮಜಲ್, ಭವ್ಯ ರಾಜೇಶ್ ಬೊಬ್ಬೇಕೆರಿ, ಬಿಎಂಎಸ್ ತಾಲೂಕು ಸಮಿತಿ ವಿಟ್ಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಭಾರತೀಯ ಮಜ್ದೂರ್ ಸಂಘದಿಂದ ಸವಲತ್ತುಗಳು ಮತ್ತು ಹೆಚ್ಚಿನ‌ ಮಾಹಿತಿಗಾಗಿ ಭೇಟಿ‌ ನೀಡಿ.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಎದುರುಗಡೆ, ಅರವಿಂದ ಸೈಕಲ್ ಸ್ಟೋರ್ಸ್ ಹತ್ತಿರ.
ದೂ.‌ಸಂ: 9900336599
9019500637

- Advertisement -

Related news

error: Content is protected !!