Monday, June 22, 2026
spot_imgspot_img
spot_imgspot_img

ದ.ಕ ಜಿಲ್ಲಾ ಪೊಲೀಸ್ ಘಟಕದ ಡಿ.ಸಿ.ಆರ್.ಬಿ. ವಿಭಾಗದ ಡಿವೈಎಸ್ಪಿಯಾಗಿ ಡಾ.ಗಾನಾ ಪಿ. ಕುಮಾರ್ ಕರ್ತವ್ಯಕ್ಕೆ ಹಾಜರು

- Advertisement -
- Advertisement -

ಪೊಲೀಸ್ ಇಲಾಖೆಯ ಪುತ್ತೂರು ಉಪವಿಭಾಗದ ಡಿವೈಎಸ್ಪಿಯಾಗಿದ್ದ ಡಾ. ಗಾನಾ ಪಿ. ಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಡಿ.ಸಿ.ಆರ್.ಬಿ. ವಿಭಾಗದ ಡಿವೈಎಸ್ಪಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಮಂಗಳೂರಿನಲ್ಲಿರುವ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿಸ್ಟ್ರಿಕ್ಟ್ ಕ್ರೈಮ್ ರೆಕಾರ್ಡ್ ಬ್ಯೂರೋದ ಡಿವೈಎಸ್ಪಿಯಾಗಿ ಕರ್ತವ್ಯಕ್ಕೆ ಹಾಜರಾಗಿರುವ ಡಾ. ಗಾನಾ ಪಿ.ಕುಮಾರ್ ಅವರು ಸಿಐಡಿ ವಿಭಾಗದ ಡಿವೈಎಸ್ಪಿಯಾಗಿ ಸೇರಿದಂತೆ ವಿವಿದೆಡೆ ಕರ್ತವ್ಯ ನಿರ್ವಹಿಸಿದ ಬಳಿಕ ಕಳೆದ ಎರಡು ವರ್ಷಗಳಿಂದ ಪುತ್ತೂರಿನಲ್ಲಿ ಡಿವೈಎಸ್ಪಿಯಾಗಿದ್ದರು.

ಇತ್ತೀಚೆಗೆ ಡಾ.ಗಾನಾ ಪಿ.ಕುಮಾರ್ ಅವರನ್ನು ಪುತ್ತೂರಿನಿಂದ ವರ್ಗಾವಣೆಗೊಳಿಸಿ ಬೆಂಗಳೂರಿನಲ್ಲಿ ಸಿಐಡಿ ವಿಭಾಗದ ಡಿವೈಎಸ್ಪಿಯಾಗಿದ್ದ ಡಾ. ವೀರಯ್ಯ ಹಿರೇಮರ್ ಅವರನ್ನು ಪುತ್ತೂರು ಡಿವೈಎಸ್ಪಿಯಾಗಿ ನೇಮಕ ಮಾಡಲಾಗಿತ್ತು. ಡಾ.ಗಾನಾ ಪಿ. ಕುಮಾರ್ ಅವರನ್ನು ಬೆಂಗಳೂರು ಸಿಐಡಿ ಡಿವೈಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಇದೀಗ ಅವರನ್ನು ಮಂಗಳೂರು ಡಿ.ಸಿ.ಆರ್.ಬಿ.ಯ ಡಿವೈಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿದ್ದು ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

- Advertisement -

Related news

error: Content is protected !!