Saturday, June 28, 2025
spot_imgspot_img
spot_imgspot_img

ನಟಿ ದಿವ್ಯಾ ಶ್ರೀಧರ್ ಪತಿ ಅಮ್ಜಾದ್ ಖಾನ್‌ಗೆ ಮಂಗಳಮುಖಿ ಜೊತೆ ಸಂಬಂಧ..! ಮಂಗಳಮುಖಿ ಹೇಳಿರುವ ಆಡಿಯೋದಲ್ಲಿ ಸ್ಟೋಟಕ ಮಾಹಿತಿ ಬಯಲು

- Advertisement -
- Advertisement -

ಕಿರುತೆರೆ ನಟಿ ದಿವ್ಯಾ ಶ್ರೀಧರ್ ಹಾಗೂ ಪತಿ ಅರ್ನವ್ ಅಮ್ಜಾದ್‌ ನಡುವಿನ ಸಂಘರ್ಷದ ಕೇಸ್‌ ಪೊಲೀಸ್ ಠಾಣಾ ಮೆಟ್ಟಿಲೇರಿರುವುದು ತಿಳಿದೇ ಇದೆ. ದಿವ್ಯಾ ಶ್ರೀಧರ್‍ ಅವರಿಗೆ ಹಿಂಸೆ ನೀಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಆರೋಪ ಪೊಲೀಸ್ ಠಾಣಾ ಮೆಟ್ಟಿಲೇರುತ್ತಿದ್ದಂತೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.ಕಿರುತೆರೆ ನಟನೂ ಆಗಿರುವ ಪತಿ ಅರ್ನವ್ ಅಮ್ಜದ್ ಮೇಲೆ ದಿವ್ಯಾ ಶ್ರೀಧರ್ ಮಾಡಿರುವ ಎಲ್ಲಾ ಆರೋಪಗಳೂ ನಿಜ ಎನ್ನುವುದು ಒಂದೊಂದೇ ಸಾಬೀತಾಗುತ್ತಿದೆ.

ಈಗಾಗಲೇ ಅರ್ನವ್ ಅಮ್ಜದ್ ಅವರನ್ನು ಚೆನ್ನೈ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ಅರ್ವನ್ ಅಮ್ಜದ್ ಬರೀ ದಿವ್ಯಾ ಶ್ರೀಧರ್ ಅವರಿಗೊಂದೇ ಅಲ್ಲ, ಮಂಗಳಮುಖಿ ಒಬ್ಬರಿಗೆ ಮೋಸ ಮಾಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಮಂಗಳಮುಖಿ ಜೊತೆ ಅರ್ನವ್ ಅಮ್ಜದ್ ಪ್ರೇಮ ಸಂಬಂಧ
ನನ್ನ ಜೊತೆ ಮದುವೆ ಆಗಿ, ನನಗೂ ಮೋಸ ಮಾಡಿದ್ದಾನೆ ಅಂತ ಖುದ್ದು ಮಂಗಳಮುಖಿಯೇ ಹೇಳಿರುವ ಆಡಿಯೋ ಈಗ ವೈರಲ್ ಆಗಿದೆ. ಅರ್ನವ್ ಅಮ್ಜದ್ ಜೊತೆ ಸಂಬಂಧ ಹೊಂದಿದ್ದರು ಎನ್ನಲಾದ ಮಂಗಳಮುಖಿ ಹೆಸರು ಪ್ರಿಯದರ್ಶಿನಿ. ಈಕೆಯ ಜೊತೆಯೇ ಅಮ್ಜಾದ್ ಗೆ ಸಂಬಂಧವಿತ್ತು ಎಂದು ಆ ಆಡಿಯೋದಲ್ಲಿ ಹೇಳಲಾಗಿದೆ. ‘ಅವನು ನನ್ನನ್ನು ಪ್ರೀತಿಸಿದ. ಆನಂತರ ಗೊತ್ತಾಯಿತು ಅವನೊಬ್ಬ ಹೆಣ್ಣುಬಾಕ ಅಂತ ಎಂದು ಆಡಿಯೋದಲ್ಲಿ ಮಂಗಳಮುಖಿ ಪ್ರಿಯದರ್ಶಿನಿ ಹೇಳಿದ್ದಾರೆ.

ಮಂಗಳಮುಖಿ ಜೊತೆ ಸಹಜೀವನ, ಬಳಿಕ ಮದುವೆ
ಚೆನ್ನೈನಲ್ಲಿ ಪ್ರಿಯದರ್ಶಿನಿ ಜೊತೆ ಅರ್ನವ್ ಅಮ್ಜದ್ ಸಹಜೀವನ ನಡೆಸಿದ್ದನಂತೆ. ಅವನು ನನ್ನ ಜೊತೆ ಲಿವಿಂಗ್ ಟು ಗೆದರ್‌ ಸಂಬಂಧದಲ್ಲಿದ್ದ. ಬಳಿಕ ನಾವಿಬ್ಬರು ವಿವಾಹವಾಗಿ, ಎರಡು ವರ್ಷ ಒಟ್ಟಿಗೆ ಇದ್ದೆವು. ಆಮೇಲೆ ನನ್ನನ್ನು ಅವನು ದೂರ ಮಾಡಿದ. ಈ ನೋವು ತಾಳಲಾರದೇ ನಾನು ಮಲೇಶಿಯಾಗೆ ಹೊರಟೆ’ ಎಂದು ಪ್ರಿಯದರ್ಶಿನಿ ಆಡಿಯೋದಲ್ಲಿ ಆರೋಪಿಸಿದ್ದಾರೆ.

astr
- Advertisement -

Related news

error: Content is protected !!