Monday, June 15, 2026
spot_imgspot_img
spot_imgspot_img

ಶಿರಾಡಿ ಘಾಟ್‌ನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ

- Advertisement -
- Advertisement -
vtv vitla

ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ಬಳಿ ಅಪರಿಚಿತ ಮಹಿಳೆಯ ಶವ ದೊರೆತಿದೆ. ಮೃತ ಮಹಿಳೆ ವಯಸ್ಸು 25 ರಿಂದ 35 ವರ್ಷ ಎಂದು ಅಂದಾಜಿಸಲಾಗಿದೆ.

10-15 ದಿನಗಳ ಹಿಂದೆ ಮೃತ ಪಟ್ಟಿರಬಹುದೆಂದು ಶಂಕಿಸಲಾಗಿದೆ. ಆತ್ಮಹತ್ಯೆಯ ಅಥವಾ ಯಾರಾದರೂ ಕೊಲೆ ಮಾಡಿ ಶವ ಇಲ್ಲಿ ಎಸೆದಿದ್ದರ ಎಂದು ತನಿಖೆಯ ನಂತರ ಬಯಲಾಗಬೇಕಾಗಿದೆ.

ಮಹಿಳೆಯು ವೋಡಾಫೋನ್ ಸಿಂಬಲ್ ಇರುವ ಕೆಂಪು ಗುಲಾಬಿ ಬಣ್ಣದ ಟಿ ಶರ್ಟ್, ಹಾಗೂ ಕಪ್ಪು ಬುದು ಬಣ್ಣದ ಶಾಟ್ಸ್ ಧರಿಸಿದ್ದು, ಬಲ ಮುಂಗೈ ನಲ್ಲಿ ಒಂದು ಟ್ಯಾಟೂ ಮಾರ್ಕ್, ಬಲ ಕೈ ನಲ್ಲಿ ಸ್ಟೀಲ್ ಬ್ರಾಸ್ ಲೈಟ್, ಎಡ ಕೈ ನಲ್ಲಿ ದಾರ, ತಾಳಿ, ಕಾಲು ಚೈನು, ಕಾಲುಂಗುರ ಧರಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಪ್ರಕರಣದ ತನಿಖೆ ಬಳಿಕವೇ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ತಿಳಿದುಬರಬೇಕಾಗಿದೆ.

- Advertisement -

Related news

error: Content is protected !!