Wednesday, September 9, 2026
spot_imgspot_img
spot_imgspot_img

ಪುತ್ತೂರು: ದ್ವಿಚಕ್ರ ವಾಹನದ ಟಯರ್ ಸ್ಪೋಟ; ದಂಪತಿ, ಮಗುವಿಗೆ ಗಾಯ

- Advertisement -
- Advertisement -

ಪುತ್ತೂರು: ಪುತ್ತೂರು ತಾಲೂಕಿನ ತಿಂಗಳಾಡಿ ಸಮೀಪದ ತ್ಯಾಗರಾಜನಗರದಲ್ಲಿ ದ್ವಿಚಕ್ರ ವಾಹನದ ಹಿಂಬದಿಯ ಟಯರ್ ಸ್ಪೋಟಗೊಂಡು ದಂಪತಿ ಮತ್ತು ಮಗು ಗಾಯಗೊಂಡಿರುವ ಘಟನೆ ನ.17ರಂದು ಸಂಜೆ ನಡೆದಿದೆ.

ಕುಂಬ್ರದಿಂದ ತಿಂಗಳಾಡಿ ಕಡೆಗೆ ದಂಪತಿ ಮತ್ತು ಮಗು ಪ್ರಯಾಣಿಸುತ್ತಿದ್ದ ಸ್ಕೂಟರ್ ತ್ಯಾಗರಾಜನಗರ ತಲುಪುತ್ತಿದ್ದಂತೆ ಹಿಂಬದಿ ಟಯರ್ ಸ್ಪೋಟಗೊಂಡು ಸ್ಕೂಟರಿನಲ್ಲಿದ್ದ ಮೂವರೂ ರಸ್ತೆಗೆಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದಾರೆ.

ಇನ್ನು ಗಾಯಾಳುಗಳನ್ನು ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!