- Advertisement -
- Advertisement -

ಉಪ್ಪಿನಂಗಡಿ: ಉಪ್ಪಿನಂಗಡಿ ಸಮೀಪದ ಬಾರ್ಯ ಗ್ರಾಮದ ಯುವತಿಯೊಬ್ಬಳು ನಾಪತ್ತೆಯಾಗಿದ್ದು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾರ್ಯದ ಕುಡುಗುಡ್ಡೆ ಮನೆ ನಿವಾಸಿ ಅಬ್ದುಲ್ ಖಾದ್ರಿ ಎಂಬವರ ಮಗಳು ಸಾಹೀದಾ(19) ಎಂಬಾಕೆ ನ.19ರಂದು ಮಧ್ಯರಾತ್ರಿಯಿಂದ ನಾಪತ್ತೆಯಾಗಿರುವ ಯುವತಿ.
ತನ್ನ ಎಂಟು ಮಕ್ಕಳ ಪೈಕಿ ಐದು ಮಂದಿ ಹೆಣ್ಣು ಮಕ್ಕಳಾಗಿದ್ದು, ಇವರ ಪೈಕಿ ಕೊನೆಯವಳಾದ ಸಾಹೀದಾ ಶನಿವಾರ ರಾತ್ರಿ ಊಟ ಮಾಡಿ ಮಲಗಿದಾಕೆ ತಡ ರಾತ್ರಿ 1 ಗಂಟೆ ಸುಮಾರಿಗೆ ಎದ್ದು ನೋಡಿದಾಗ ನಾಪತ್ತೆಯಾಗಿರುವುದು ಕಂಡು ಬಂದಿರುತ್ತದೆ. ಈಕೆಗೆ ಕಳೆಂಜಿಬೈಲಿನ ಮುದಾಸೀರ್ ಎಂಬಾತನೊಂದಿಗೆ ಮೊಬೈಲ್ ಸಂಪರ್ಕ ಇದ್ದು , ಆತನೊಂದಿಗೆ ಹೋಗಿರುವ ಸಂಶಯವಿದೆ ಎಂದು ಅಬ್ದುಲ್ ಖಾದ್ರಿಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ನಾಪತ್ತೆಯಾದ ಯುವತಿಯು ಎಲ್ಲಿಯಾದರೂ ಪತ್ತೆಯಾದರೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಿದ್ದಾರೆ.
- ಮೊಬೈಲ್ ಸ್ಕ್ರೀನ್ ಪ್ರೊಟೆಕ್ಟರ್ಗಳಿಗೆ BIS ಪ್ರಮಾಣಪತ್ರ ಕಡ್ಡಾಯ-ಕೇಂದ್ರ ಸರ್ಕಾರದಿಂದ ಆದೇಶ
- ವಿಠಲ ಜಿ.ಎಸ್.ಬಿ. ಸೌಹಾರ್ದ ಸಹಕಾರಿ ಸಂಘ(ನಿ) 2025-26ನೇ ವಾರ್ಷಿಕ ಮಹಾಸಭೆ
- ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು
- ವಂದೇ ಮಾತರಂ ಹಾಡಲು ನಿರಾಕರಿಸಿದರೆ ಶಿಕ್ಷೆ ಇಲ್ಲ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ
- ರಾಮನಗರ : ಹಳ್ಳದ ನೀರಲ್ಲಿ ಮುಳುಗಿ ಇಬ್ಬರು ಮಕ್ಕಳು ದುರ್ಮರಣ

- Advertisement -








