- Advertisement -
- Advertisement -



ಮಂಗಳೂರು: ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಸೋಮವಾರ ಮಧ್ಯಾಹ್ನ ಮಂಗಳೂರು ಪೊಲೀಸ್ ಆಯುಕ್ತರ ಕೋರಿಕೆಯಂತೆ ಆಯುಕ್ತರ ಕಚೇರಿಗೆ ಆಗಮಿಸಿದರು.
ಪೊಲೀಸ್ ಅಧಿಕಾರಿ, ಸಿಬಂದಿಗಳು ರೂಪೇಶ್ ಅವರಿಗೆ ಶುಭಾಶಯ ಕೋರಿದರು. ರೂಪೇಶ್ ತುಳುವಿನಲ್ಲಿ ಮಾತನಾಡಿದವರೊಂದಿಗೆ ತುಳುವಿನಲ್ಲೇ ಪ್ರತಿಕ್ರಿಯಿಸಿದರು.

ರೂಪೇಶ್ ಅವರಿಗೆ ಅಭಿನಂದನೆ ಸಲ್ಲಿಸಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ನಾವು ಆಹ್ವಾನಿಸಿದ ಕೂಡಲೇ ರೂಪೇಶ್ ಒಪ್ಪಿಕೊಂಡು ಬಂದಿದ್ದಾರೆ. ಅವರಿಗೆ ಪೊಲೀಸ್ ಇಲಾಖೆಯ ಮೇಲೆ ಇರುವ ಅಭಿಮಾನವನ್ನು ಇದು ತೋರಿಸುತ್ತದೆ. ರೂಪೇಶ್ ಇನ್ನಷ್ಟು ಸಾಧನೆ ಮಾಡಿ ಕನ್ನಡ ತುಳು ಭಾಷೆಯ ಕಂಪನ್ನು ಜಗತ್ತಿನಾದ್ಯಂತ ಪಸರಿಸಲಿ ಎಂದರು.
- ದುನಿಯಾ ವಿಜಯ್-–ನಾಗರತ್ನ ವಿಚ್ಛೇದನ: ₹2 ಕೋಟಿ ಜೀವನಾಂಶಕ್ಕೆ ಹೈಕೋರ್ಟ್ ಆದೇಶ
- ಪದೆಂಜಾರಿನಲ್ಲಿ ಇಂದು 12ನೇ ವರ್ಷದ ಮೊಸರು ಕುಡಿಕೆ ಉತ್ಸವ
- ದರ್ಬೆ ಗಲಾಟೆ ಪ್ರಕರಣ: ಎರಡೂ ಪ್ರಕರಣಗಳ ಸಮಗ್ರ ತನಿಖೆಗೆ ಹೈಕೋರ್ಟ್ ಸೂಚನೆ
- WIM ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ-ಜಿಲ್ಲಾಧ್ಯಕ್ಷೆಯಾಗಿ ಶಿನೀರ ಬಾನು ಪುನರಾಯ್ಕೆ
- ಶಾಸಕರ ಸಮ್ಮುಖದಲ್ಲೇ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ: ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ – ರಾಜೇಶ್ ಬನ್ನೂರು
- Advertisement -








