Monday, June 30, 2025
spot_imgspot_img
spot_imgspot_img

ಕಟ್ಟಡದ ಮೇಲಿಂದ ಬಿದ್ದು ಒಂದೂವರೆ ವರ್ಷದ ಮಗು ಸಾವು

- Advertisement -
- Advertisement -

ಬೆಂಗಳೂರು: ಕಟ್ಟಡದ ಮೇಲಿಂದ ಬಿದ್ದು ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಚಾಮರಾಜಪೇಟೆಯ ಆಜಾದ್ ನಗರದ 6ನೇ ಕ್ರಾಸ್​ನಲ್ಲಿ ನಡೆದಿದೆ.

ಒಂದೂವರೆ ವರ್ಷದ ದೀಕ್ಷಾ ಮಹಡಿ‌ ಮೇಲಿಂದ ಬಿದ್ದು ಸಾವನ್ನಪ್ಪಿದ ಮಗು. ವಿನಯ್ ಎಂಬ ದಂಪತಿಯ ಪುತ್ರಿ ದೀಕ್ಷಾ, ಸ್ನೇಹಿತರ ಮನೆಗೆ ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ. ರಾತ್ರಿ 9 ಗಂಟೆ ಸುಮಾರಿಗೆ ಊಟ ಮಾಡಿಸುತ್ತಿದ್ದ ದೀಕ್ಷಾ ತಾಯಿ. ಆ ವೇಳೆ ಆಟವಾಡುತ್ತ ಗ್ರಿಲ್ಸ್ ಮೇಲೆ ಮಗು ಹತ್ತಿದೆ. ಬಳಿಕ ನೋಡ ನೋಡುತ್ತಿದ್ದಂತೆ ಜಾರಿ ಕೆಳ ಬಿದ್ದಿದ್ದು, ಕೂಡಲೇ ಪೋಷಕರು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆ ಮಾರ್ಗ ಮಧ್ಯೆ ಮಗು ಕೊನೆಯುಸಿರೆಳೆದಿದೆ. ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

- Advertisement -

Related news

error: Content is protected !!