Friday, April 26, 2024
spot_imgspot_img
spot_imgspot_img

ಕಾಡುತ್ಪನ್ನಗಳಿಗೆ ಹೊಸ ಬ್ರಾಂಡ್!!

- Advertisement -G L Acharya panikkar
- Advertisement -

ದಕ್ಷಿಣ ಕನ್ನಡ: ಅರಣ್ಯದ ಒಳಗಿನ ಕಾಡುತ್ಪನ್ನಗಳು ಮುಂದಿನ ದಿನಗಳಲ್ಲಿ ಹೊಸ ಬ್ರಾಂಡ್ ರೂಪದಲ್ಲಿ ಜನರ ಕೈ ಸೇರುವ ಯೋಜನೆಯೊಂದನ್ನು ದಕ್ಷಿಣಕನ್ನಡ ಜಿಲ್ಲಾಡಳಿತ ರೂಪಿಸಿಕೊಂಡಿದೆ. ಪ್ರಧಾನಮಂತ್ರಿ ವನ್ ಧನ್ ಯೋಜನೆಯ ಮೂಲಕ ಈ ಮಾರುಕಟ್ಟೆಯನ್ನು ಆರಂಭಿಸಲು ದಕ್ಷಿಣಕನ್ನಡ ಜಿಲ್ಲೆಯು ಸುಬ್ರಹ್ಮಣ್ಯ ಹಾಗೂ ಚಾರ್ಮಾಡಿ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ.

ಕಾಡಿನಂಚಿನಲ್ಲಿ ವಾಸಿಸುವ ಕುಟುಂಬಗಳು ಕಾಡುತ್ಪತ್ತಿಗಳಾದ ರಾಮಪತ್ರೆ, ದಾಲ್ಚಿನ್ನಿ, ಜೇನು, ಮಸಾಲ ಉತ್ಪನ್ನಗಳು, ಕೆಲವು ಕಾಡಿನ ಹೂವುಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ಈ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಇಂಥಹ ಉತ್ಪನ್ನಗಳನ್ನು ದಕ್ಷಿಣಕನ್ನಡ ಜಿಲ್ಲೆಯ ಹೊಸ ಬ್ರಾಂಡ್ ರೂಪದಲ್ಲಿ ಪರಿಚಯಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಪ್ರಧಾನಮಂತ್ರಿ ವನ್ ಧನ್ ಯೋಜನೆ ಮೂಲಕ 30 ಲಕ್ಷ ರೂಪಾಯಿಗಳ ಅನುದಾನ ಈ ಯೋಜನೆಗೆ ಸಿಗುತ್ತಿದ್ದು, ಜಿಲ್ಲೆಯ ಎರಡು ಕಡೆಗಳಲ್ಲಿ ಈ ಉತ್ಪನ್ನಗಳ ಮಾರುಕಟ್ಟೆ ಆರಂಭಿಸಲು ನಿರ್ಧರಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಹಾಗೂ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಈ ಕಾಡುತ್ಪತ್ತಿ ಮಾರುಕಟ್ಟೆಗಳು ಶೀಘ್ರವೇ ಆರಂಭಗೊಳ್ಳಲಿದೆ. ವನ್ ಧನ್ ಯೋಜನೆಯ ಅನುದಾನದ ಜೊತೆಗೆ ಸಿಎಸ್.ಆರ್ ಫಂಡ್, ಎನ್.ಆರ್.ಯು.ಎಂ ಸೇರಿದಂತೆ ಹಲವು ಯೋಜನೆಗಳಿಂದ ಇದಕ್ಕೆ ಅನುದಾನವನ್ನು ಕೊಡಿಸುವ ಪ್ರಯತ್ನವೂ ನಡೆಯಲಿದೆ.

ಸ್ವಸಹಾಯ ಗುಂಪುಗಳು, ಗ್ರಾಮ ಅರಣ್ಯ ಸಮಿತಿ, ಲ್ಯಾಂಪ್ಸ್ ಮೂಲಕ ಈ ಮಾರುಕಟ್ಟೆಯನ್ನು ನಿರ್ವಹಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಗ್ರಾಮ ಅರಣ್ಯ ಸಮಿತಿ ಸದಸ್ಯರು ಈ ಮಾರುಕಟ್ಟೆಯ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಲು ಅವಕಾಶವನ್ನು ನೀಡಲಾಗುವುದು. ಸುಬ್ರಹ್ಮಣ್ಯ ಹಾಗೂ ಚಾರ್ಮಾಡಿಯ ಈ ಎರಡೂ ಮಾರುಕಟ್ಟೆ ಘಟಕಗೆ ತಲಾ 15 ಲಕ್ಷ ವಿನಿಯೋಗಿಸಲಾಗುವುದು. ಸುಬ್ರಹ್ಮಣ್ಯದಲ್ಲಿ ಆರಂಭಗೊಳ್ಳುವ ಘಟಕಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದಲೂ ವ್ಯವಸ್ಥೆಗಳನ್ನು ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಯಾವ ರೀತಿ ಉತ್ತರಕನ್ನಡ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಸಿಗುವ ಉತ್ಪನ್ನಗಳನ್ನು ಬ್ರಾಂಡ್ ಮೂಲಕ ಪರಿಚಯಿಸಲಾಗುತ್ತಿದೆಯೋ ಅದೇ ರೀತಿ ದಕ್ಷಿಣಕನ್ನಡ ಜಿಲ್ಲೆಯ ಬ್ರಾಂಡ್ ಅನ್ನು ಪರಿಚಯಿಸುವ ವ್ಯವಸ್ಥೆ ಈ ಮಾರುಕಟ್ಟೆ ಘಟಕಗಳ ಮೂಲಕ ನಡೆಯಲಿದೆ.

- Advertisement -

Related news

error: Content is protected !!