- Advertisement -




- Advertisement -
ಎರಡು ವರ್ಷದ ಮಗು ಮಹಡಿ ಮೇಲಿಂದ ಬಿದ್ದು ಸಾವನ್ನಪ್ಪಿದ ಘಟನೆ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದೆ. ಹೆಬ್ಬಗೋಡಿಯ ಶಂಕರಪ್ಪ ಬಡಾವಣೆಯ ಎರಡು ವರ್ಷದ ಶ್ರೇಯನ್ ಮೃತಪಟ್ಟ ಮಗು.
ಶ್ರೇಯನ್ ಗುಲ್ಬರ್ಗ ಮೂಲದ ಜಗದೀಶ್ ಹಾಗೂ ಪೂಜಾ ದಂಪತಿಯ ಪುತ್ರ. ಜಗದೀಶ್ ಬಿಎಂಆರ್ಸಿಎಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಮನೆಯ ಮೊದಲನೇ ಮಹಡಿಯಲ್ಲಿ ಆಟವಾಡುತ್ತಿದ್ದ ಶ್ರೇಯನ್ ಆಯಾತಪ್ಪಿ ಮಹಡಿಯ ಮೇಲಿಂದ ಕೆಳಗೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪುಟ್ಟ ಕಂದಮ್ಮ ಸಾವನ್ನಪ್ಪಿದೆ.
ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
- Advertisement -