Tuesday, May 7, 2024
spot_imgspot_img
spot_imgspot_img

ವಿಟ್ಲ: ಮಹತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ವರ್ಷಾವಧಿ ಜಾತ್ರೋತ್ಸವ

- Advertisement -G L Acharya panikkar
- Advertisement -

ವಿಟ್ಲ: ಮಹತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯು ದಿನಾಂಕ 14/01/2024 ರಿಂದ 22/01/2024 ರವರೆಗೆ ನಡೆಯಲಿದೆ.

ದಿನಾಂಕ 03/01/2024ನೇ ಬುಧವಾರ ಬೆಳಿಗ್ಗೆ ಗಂಟೆ 9.30ಕ್ಕೆ ಗೊನೆ ಮುಹೂರ್ತ ನಡೆಯಲಿದ್ದು,ದಿನಾಂಕ 14/01/2024ನೇ ಆದಿತ್ಯವಾರದಂದು ಧ್ವಜಾರೋಹಣದೊಂದಿಗೆ ಪ್ರಾರಂಭವಾಗಿ ಒಂಭತ್ತು ದಿವಸಗಳ ಕಾಲ ಉತ್ಸವಾದಿಗಳು ಜರಗಲಿರುವುದು.

ದಿನಾಂಕ 14/01/2024ರ ಆದಿತ್ಯವಾರದಂದು ಲಕ್ಷದೀಪೋತ್ಸವ ನಡೆಯಲಿದೆ. ದಿನಾಂಕ 18/01/2024ರ ಗುರುವಾರ ದಂದು ಬೆಳಿಗ್ಗೆ 9 ಗಂಟೆಗೆ ರುದ್ರಯಾಗ ನಡೆಯಲಿರುವುದು. ರಾತ್ರಿ ಗಂಟೆ 8.30ಕ್ಕೆ ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಬರುವುದು, ಬಳಿಕ ಬಯ್ಯದ ಬಲಿ ಉತ್ಸವ ನಡೆಯಲಿದೆ. ದಿನಾಂಕ 19/01/2024ರ ಶುಕ್ರವಾರದಂದು ಕೆರೆ ಆಯನ ನಡೆಯಲಿದೆ. ದಿನಾಂಕ 20/01/2024 ನೇ ಶನಿವಾರ ದಂದು ಹೂ ತೇರು ನೆರವೇರಲಿದೆ. ದಿನಾಂಕ 21/01/2024ನೇ ಆದಿತ್ಯವಾರ ಸಂಜೆ ಗಂಟೆ 4.30ಕ್ಕೆ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಬರುವುದು. ರಾತ್ರಿ ಗಂಟೆ 9ಕ್ಕೆ “ಮಹಾರಥೋತ್ಸವ” ನಡೆಯಲಿದೆ.

ದಿನಾಂಕ 22/01/2024ನೇ ಸೋಮವಾರದಂದು ಕಾಲಾವಧಿ ಬಟ್ಟಲು ಕಾಣಿಕೆ, ತುಲಾಭಾರ ಸೇವೆ ನಡೆಯಲಿದೆ. ದಿನಾಂಕ 24/01/2024 ನೇ ಬುಧವಾರದಂದು ದೇವಸ್ಥಾನದ ಎದುರು ದೈವಗಳ ನೇಮೋತ್ಸವ ನಡೆಯಲಿದೆ. ದಿನಾಂಕ 25/01/2024ನೇ ಗುರುವಾರ ದಂದು ವಿಟ್ಲ ಅರಮನೆಯಲ್ಲಿ ದೈವಕ್ಕೆ ನೇಮ ನಡೆದ ಬಳಿಕ ಕೇಪುವಿಗೆ ಭಂಡಾರ ಹೊರಡಲಿದೆ.

ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ಶ್ರೀ ದೇವರ ಗಂಧ ಪ್ರಸಾದ ಸ್ವೀಕರಿಸಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

- Advertisement -

Related news

error: Content is protected !!