Sunday, June 14, 2026
spot_imgspot_img
spot_imgspot_img

ಬೈಕ್ ಮತ್ತು ಕಾರು ನಡುವೆ ಅಪಘಾತ; ಐವರು ಸಾವು,ಇಬ್ಬರು ಗಂಭೀರ..!

- Advertisement -
- Advertisement -

ಬೈಕ್ ಮತ್ತು ಕಾರು ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ 5 ಜನರ ಸಾವನ್ನಪ್ಪಿರೋ ಘಟನೆ ಮುಗಳಖೋಡ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಮೃತಪಟ್ಟವರನ್ನು ಮಲ್ಲಿಕಾರ್ಜುನ್ ಮರಾಠೆ (16 ), ಲಕ್ಷ್ಮೀ ಮರಾಠೆ (19), ಆಕಾಶ ಮರಾಠೆ (14 ) ಕಾರು ಚಾಲಕ ಶ್ರೀಕಾಂತ ಪಡತರಿ (22) ಬೈಕ್ ಸವಾರ ನಾಗಪ್ಪ ಯಡವನ್ನವರ್ (48) ಎಂದು ಗುರುತಿಸಲಾಗಿದೆ.

ಕಾರು ಮೊದಲು ಬೈಕ್ ಸವಾರನಿಗೆ ಗುದ್ದಿ ಬಳಿಕ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಐದು ಮಂದಿ ಸ್ಥಳದಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಹಾರೂಗೇರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನುಜ್ಜು ಗುಜ್ಜಾಗಿದೆ. ಈ ಘಟನೆಯಲ್ಲಿ ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

Related news

error: Content is protected !!