Sunday, June 21, 2026
spot_imgspot_img
spot_imgspot_img

ಆಧ್ಯಾತ್ಮದ ಕಡೆ ವಾಲಿದ ಮಾಜಿ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೊಟೂರು

- Advertisement -
- Advertisement -

ಬೆಳಗ್ಗೆ ಮದುವೆಯಾಗಿ ಸಂಜೆ ವೇಳೆಗೆ ವಿವಾದ ಸೃಷ್ಟಿಸಿಕೊಂಡು ಆತ್ಮಹತ್ಯೆ ಯತ್ನಿಸಿದ್ದ ಚೈತ್ರಾ ಕೊಟೂರು ಎಲ್ಲಾ ಜಂಜಾಟಗಳಿ0ದ ದೂರ ಸರಿದು ಆಧ್ಯಾತ್ಮದ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಮಾರ್ಚ್ ನಲ್ಲಿ ಚೈತ್ರಾ ಕೊಟ್ಟೂರು ಗೆಳೆಯ ನಾಗಾರ್ಜುನ್ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಕೆಲ ಗಂಟೆಗಳಲ್ಲಿ ಎರಡು ಕುಟುಂಬದವರ ನಡುವೆ ದೊಡ್ಡ ಜಟಾಪಟಿ ಶುರುವಾಗಿತ್ತು. ಅಲ್ಲದೆ ಪ್ರಕರಣ ಪೊಲೀಸ್ ಠಾಣಾ ಮೆಟ್ಟಿಲೇರಿದ್ದ ಘಟನೆ ಎಲ್ಲೆಡೆಯೂ ಸುದ್ಧಿಯಾಗಿತ್ತು.

ಮುರಿದ ಮದುವೆ ನಂತರ ಆಧ್ಯಾತ್ಮದ ಕಡೆ ವಾಲಿದ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ನಟಿ ಚೈತ್ರಾ ಕೊಟೂರು ಈಗ ದಿಢೀರ್ ಅಂತ ಅಧ್ಯಾತ್ಮಿಕದ ಕಡೆ ವಾಲಿದ್ದು, ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಓಶೋ ಧ್ಯಾನ ಮಂದಿರಕ್ಕೆ ಸೇರಿಕೊಂಡಿರುವ ಚೈತ್ರಾ ಕೊಟೂರುಗೆ ಅಲ್ಲಿನ ಗುರುಗಳು ಮಾ ಪ್ರಗ್ಯಾ ಭಾರತಿ ಎಂದು ನಾಮಕರಣ ಮಾಡಿದ್ದಾರೆ. ಸದ್ಯ ಈ ಕುರಿತಂತೆ ಫೋಟೋಗಳನ್ನ ಚೈತ್ರಾ ಕೊಟೂರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊ0ಡಿದ್ದಾರೆ.

ಚೈತ್ರಾ ಅವರು ಸ್ವಾಮಿ ಗೋಪಾಲ ಭಾರತಿ ಅವರೊಂದಿಗಿನ ಫೋಟೋವನ್ನು ಶೇರ್ ಮಾಡಿದ್ದು ಅದಕ್ಕೆ ಪ್ರೀತಿಯ ಗುರುಗಳಾದ ಸ್ವಾಮಿ ಗೋಪಾಲ ಭಾರತಿ ಅವರೊಂದಿಗೆ ಮಾ ಪ್ರಗ್ಯಾ ಭಾರತಿ ಎಂದು ಕ್ಯಾಪ್ಷನ್ ನೀಡಿದ್ದಾರೆ. ಸ್ವಾಮಿ ಗೋಪಾಲ ಭಾರತಿ ಅವರಿಂದ ನಡೆಯುತ್ತಿರುವ ಓಶೋ ಧ್ಯಾನ ಶಿಬಿರಕ್ಕೆ ಸೇರಿರುವ ಅವರು ತಮ್ಮ ಹೆಸರನ್ನು ಕೂಡ ಬದಲಾಯಿಸಿದ್ದಾರೆ. ಮಾ ಪ್ರಗ್ಯಾ ಭಾರತಿ ಎಂದು ಚೈತ್ರಾ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ. ಓಶೋ ಧ್ಯಾನ ಶಿಬಿರದಲ್ಲಿ ಧ್ಯಾನ, ನೃತ್ಯದಂತಹ ಮಾರ್ಗಗಳ ಮೂಲಕ ಹೊಸ ಜೀವನ ಆರಂಭಿಸಿದ್ದಾರೆ.

- Advertisement -

Related news

error: Content is protected !!