ವಿದ್ಯಾರ್ಥಿಗಳು ಅವಕಾಶಗಳ ಸದ್ಬಳಕೆ ಮಾಡಿಕೊಂಡಾಗ ಯಶಸ್ಸು ಸಾಧ್ಯ.- ಬಾಲಕೃಷ್ಣ ಕಾರಂತ್ ಎರುಂಬು





ಅಳಿಕೆ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ.)ಬಂಟ್ವಾಳ ತಾಲೂಕು ಘಟಕ ನೇತೃತ್ವದಲ್ಲಿ ಚಿಗುರೆಲೆ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಇದರ ಸಂಯೋಜನೆಯಲ್ಲಿ ಸ್ವಾತಂತ್ರೋತ್ಸವ ಕವಿಗೋಷ್ಠಿ – 2025 ಕಾರ್ಯಕ್ರಮ ಆ.23 ರಂದು ಶ್ರೀ ವಿಷ್ಣುಮಂಗಲ ದೇವಸ್ಥಾನದ ವಠಾರ ಎರುಂಬು ಅಳಿಕೆಯಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ.) ಬಂಟ್ವಾಳ ತಾಲೂಕು ಘಟಕ ಗೌರವಾಧ್ಯಕ್ಷ ಬಾಲಕೃಷ್ಣ ಕಾರಂತ್ ಎರುಂಬು ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ” ವಿದ್ಯಾರ್ಥಿಗಳು ಅವಕಾಶಗಳ ಸದ್ಬಳಕೆ ಮಾಡಿಕೊಂಡಾಗ ಯಶಸ್ಸು ಸಾಧ್ಯ. ಸಾಹಿತ್ಯವು ಯಾವ ವಿದ್ಯಾರ್ಥಿಗಳ ಅಧ್ಯಯನಕ್ಕೂ ಅಡಚಣೆಯನ್ನು ಉಂಟು ಮಾಡುವುದಿಲ್ಲವೆಂದು” ಹೇಳಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಉದ್ಘಾಟಿಸಿ “ಸ್ವರಚಿತ ಕವನಗಳೊಂದಿಗೆ ಸಂಭ್ರಮಿಸುತ್ತಿರುವ ಮಕ್ಕಳು ಭವಿಷ್ಯದ ಬಗ್ಗೆ ಹೊಸಭರವಸೆಯನ್ನು ಮೂಡಿಸುತ್ತಾರೆ ಇವರಿಗೆ ವೇದಿಕೆಯನ್ನೊದಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಪದ್ಮನಾಭ ಪೂಜಾರಿ ಸಣ್ಣಗುತ್ತು, ಅಧ್ಯಕ್ಷರು ಗ್ರಾಮ ಪಂಚಾಯತ್ ಅಳಿಕೆ, ರಮೇಶ್ ಬಾಯಾರು ಅಧ್ಯಕ್ಷರು ಮಕ್ಕಳ ಕಲಾಲೋಕ ಬಂಟ್ವಾಳ, ಗಣೇಶ್ ಪ್ರಸಾದ್ ಪಾಂಡೇಲು, ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ವಿಟ್ಲ ಹೋಬಳಿ ಘಟಕ, ನಾರಾಯಣ ರೈ ಕುಕ್ಕುವಳ್ಳಿ, ಸಂಪಾದಕರು ಹಿರಿಯ ಸಾಹಿತಿಗಳು ಪುತ್ತೂರು, ವಸಂತ ಕುಲಾಲ್, ಅಧ್ಯಕ್ಷರು ವಿಷ್ಣು ಮಂಗಲ ದೇವಸ್ಥಾನ ಎರುಂಬು, ಶಾಲಿನಿ ಸದಾನಂದ ಅಧ್ಯಕ್ಷರು, ಸುಜ್ಞಾನ ಮಹಿಳಾ ಮಂಡಲ ಎರುಂಬು, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 2023 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ಮತ್ತು ಕವಿಗೋಷ್ಠಿ ಅಧ್ಯಕ್ಷರು, ಗೋಪಾಲಕೃಷ್ಣ ನೇರಳಕಟ್ಟೆಯವರನ್ನು ಅಭಿನಂದಿಸಿ, ಗೌರವಿಸಲಾಯಿತು. ಕುಮಾರಿ ಧನ್ವಿತಾ ಕಾರಂತ್ ಅಳಿಕೆ ಮತ್ತು ಕು. ಧನುಶ್ರೀ ಎಸ್ ಪ್ರಾರ್ಥಿಸಿದರು. ನಾರಾಯಣ ಕುಂಬ್ರ, ಸಂಯೋಜಕರು ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸ್ವಾಗತಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ.)ಬಂಟ್ವಾಳ ತಾಲೂಕು ಅಧ್ಯಕ್ಷರು, ಶ್ರೀಕಲಾ ಕಾರಂತ್ ಅಳಿಕೆ ಪ್ರಸ್ತಾವಿಕಗೈದರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ.)ಬಂಟ್ವಾಳ ತಾಲೂಕು ಜೊತೆ ಕಾರ್ಯದರ್ಶಿ ರಶ್ಮಿತಾ ಸುರೇಶ್ ಜೋಗಿಬೆಟ್ಟು ಧನ್ಯವಾದವಿತ್ತರು. ಕಾಣಿಯೂರು ಸ.ಪ.ಪೂ. ಕಾಲೇಜಿನ ಉಪನ್ಯಾಸಕ ಜಗದೀಶ್ ಬಾರಿಕೆ ಕಾರ್ಯಕ್ರಮ ನಿರೂಪಿಸಿದರು. ಎಂ ಎಸ್ ಪೂಜಾ ಅಳಿಕೆ ಸಹಕರಿಸಿದರು.

ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ ಇದರ ಮುಖ್ಯ ಗುರುಗಳು, ರಾಷ್ಟ್ರೀಯ ತರಬೇತುದಾರರು, ಸಂಪನ್ಮೂಲ ವ್ಯಕ್ತಿಯಾಗಿರುವ ಗೋಪಾಲಕೃಷ್ಣ ನೇರಳಕಟ್ಟೆ ಇವರ ಅಧ್ಯಕ್ಷತೆಯಲ್ಲಿ ನಡೆದ ಮಕ್ಕಳ ಕವಿಗೋಷ್ಠಿಗೆ, ದ.ಕ. ಆಮಂತ್ರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಜಿಲ್ಲಾಧ್ಯಕ್ಷರಾದ ವಿಂಧ್ಯಾ ಎಸ್ ರೈ ಚಾಲನೆ ನೀಡಿದರು.

ಕವಿಗೋಷ್ಠಿಯಲ್ಲಿ ಸ. ಉ. ಹಿ. ಪ್ರಾ.ಶಾಲೆ ಪಡಿಬಾಗಿಲು ಇಲ್ಲಿನ ವಿನಮ್ರ, ಸಾನ್ಯ, ಬಿಂದುಶ್ರೀ, ನೇಹಲ್, ಹಿತಾಶ್ರೀ, ಅನನ್ಯ, ಹನ್ಸಿಕ, ಧನ್ವಿಕಾ, ಧನ್ವಿತ್, ಭುವಿಕಾ, ರಕ್ಷಣ್, ಕೆ. ಪಿ.ಚೈತನ್ಯ, ದ.ಕ. ಜಿ.ಪಂ. ಉ. ಹಿ. ಪ್ರಾ. ಶಾಲೆ ದೇಲಂತಬೆಟ್ಟು ಇಲ್ಲಿನ ವಿದ್ಯಾರ್ಥಿಗಳಾದ ಅವಿಲ್ ಡಿಸೋಜ, ಖದೀಜತ್ ಮಿನ್ನ,ತನವ್,ಅನ್ವಿ, ಲಕ್ಷಿತಾ, ಯಶ್ವಿತ್,ಫಾತಿಮತ್ ನಾದಿಯಾ, ಫಾತಿಮತ್ ನಾಮಿಯಾ, ಫಾತಿಮತ್ ಶಝ್ನ, ಅಹಲಂ, ಹಿತ, ಖದೀಜತ್ ಅಸ್ನ. ಪ್ರೌಢಶಾಲೆ ಕೇಪು ಕಲ್ಲಂಗಳ ಇಲ್ಲಿನ ರಚನೇಶ್ವರಿ, ಗುಣಶ್ರೀ,ಧನ್ವಿತಾ ಜಿ. ಪಿ,ಪ್ರಜ್ಞಾ, ರಕ್ಷಿತಾ,ಶ್ರೀ ಸತ್ಯ ಸಾಯಿ ಲೋಕ ಸೇವಾ ವಿದ್ಯಾಸಂಸ್ಥೆಯ ಮೌಲ್ಯ ಡಿ.ಎಂ,ಸೋಹಮ್ ಶ್ರೀಧರ,ಧನುಶ್ರೀ ಎಸ್ ಅಳಿಕೆ, ಧನ್ವಿತಾ ಕಾರಂತ್ ಅಳಿಕೆ, ಶಿರ್ಷಿತಾ ಕಾರಂತ್ ಅಳಿಕೆ, ಹಿರಿಯ ಮತ್ತು ಯುವ ಕವಿಗಳಾದ ಶ್ರೀ ಸಂಜೀವ ಮಿತ್ತಳಿಕೆ, ಮಲ್ಲಿಕಾ ಜೆ ರೈ, ಗಿರೀಶ್ ಪೆರಿಯಡ್ಕ, ಆತ್ಮಿಕಾ ಏಮಾಜೆ, ಮಮತಾ ಡಿ ಕೆ ಅನಿಲಕಟ್ಟೆ, ಶೈಲಜಾ ಕೇಕಣಾಜೆ, ತಶ್ವಿ ಶಾಂಭವಿ ಜೋಗಿಬೆಟ್ಟು,ಲೇಖನ ಏಮಾಜೆ, ಎಂ ಎಸ್ ಪೂಜಾ ಅಳಿಕೆ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಅಪೂರ್ವ ಕಾರಂತ್ ದರ್ಬೆ ಭಾಗವಹಿಸಿದ್ದರು.
ಎಳೆಯ ಕವಿಗಳ ಕವನ ವಾಚನ ಕಲರವ ಎಲ್ಲರ ಮನರಂಜಿಸಿತು. ಕು. ಅಪೂರ್ವ ಕಾರಂತ್ ಮತ್ತು ಕು. ಶಿರ್ಷಿತಾ ಕಾರಂತ್ ಕವಿಗೋಷ್ಠಿ ನಿರೂಪಣೆಗೈದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.









