Thursday, September 10, 2026
spot_imgspot_img
spot_imgspot_img

ಅಳಿಕೆ(ಸೆ.14 -16) ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ವತಿಯಿಂದ ಶ್ರೀ ವಿದ್ಯಾಗಣಪತಿ ಮಹೋತ್ಸವ

- Advertisement -
- Advertisement -

ಅಳಿಕೆ: ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ವತಿಯಿಂದ ಶ್ರೀ ಸತ್ಯಸಾಯಿ ಪ್ರಾರ್ಥನಾ ಮಂದಿರದಲ್ಲಿ ಶ್ರೀ ವಿದ್ಯಾಗಣಪತಿ ಮಹೋತ್ಸವವು ಸೆಪ್ಟೆಂಬರ್ 14 ರಿಂದ 16ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.

ಸೆ.14 ಸೋಮವಾರ ಬೆಳಿಗ್ಗೆ 6 ಗಂಟೆಗೆ ವಿಗ್ರಹ ಪ್ರತಿಷ್ಠಾಪನೆ ಮತ್ತು ಪ್ರಥಮ ಆರತಿಯನ್ನು ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳು, ಅಳಿಕೆ ಇಲ್ಲಿನ ಮ್ಯಾನೇಜಿಂಗ್ ಟ್ರಸ್ಟಿ ಕೆ. ಎಸ್. ಕೃಷ್ಣ ಭಟ್, ಹಾಗೂ ಅಧ್ಯಾಪಕರಾದ ಶ್ಯಾಮ ಕುಶಲ ಶೆಟ್ಟಿ ನೆರವೇರಿಸಲಿದ್ದಾರೆ. 7.30ಕ್ಕೆ ಗಣಪತಿ ಹವನ, 9.30ಕ್ಕೆ ಪೂಜಾರಾಧನೆ, ನಾಮಾರ್ಚನೆ ಮತ್ತು ಭಜನೆ, 12.15ಕ್ಕೆ ಮಹಾಮಂಗಳಾರತಿ, ಸಹಸ್ರಾರತಿ, ಪ್ರಸಾದ ವಿತರಣೆ. ಬೆಂಗಳೂರಿನ ಖ್ಯಾತ ನ್ಯೂರಾಲಜಿಸ್ಟ್ ಡಾ. ಕುಲದೀಪ್ ಶೆಟ್ಟಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಪ್ರಭಾಕರ ರೆಡ್ಡಿ, ಬಾಗೇಪಲ್ಲಿ, ಚಿಕ್ಕಬಳ್ಳಾಪುರದ ಭಾ.ಜ.ಪಮ ಯುವ ಮೋರ್ಚಾದ ಅಧ್ಯಕ್ಷ ಕೃಷ್ಣಮೂರ್ತಿ ಎಂ.ಎನ್. ಮರಳಕುಂಟೆ ಘನ ಉಪಸ್ಥಿತರಿರಲಿದ್ದಾರೆ.
ಅಪರಾಹ್ನ 2.45ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಹೈಕೋರ್ಟ್ ಹಿರಿಯ ನ್ಯಾಯವಾದಿ ಉದಯ ಪ್ರಕಾಶ್ ಮುಳಿಯ ಹಾಗೂ ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿನ ಡೀನ್ ಡಾ|ವಿಜಯ ಸರಸ್ವತಿ ಬಿ., ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂಜೆ 5-30ಕ್ಕೆ ನಾಮಸಂಕೀರ್ತನೆ, ಬಳಿಕ ಎರುಂಬು ಶಂಕರನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕರಾದ ಬಾಲಕೃಷ್ಣ ಕಾರಂತ ಇವರಿಂದ ಸಂಧ್ಯಾರತಿ ನಡೆಯಲಿದೆ.
ಸಂಜೆ 6ರಿಂದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ, ಇದರ ಉದ್ಘಾಟನೆಯನ್ನು ನಿವೃತ್ತ ಸೈನಿಕರು ಹಾಗೂ ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿಗಳೂ ಆದ ಶಿವರಾಮ ರಾವ್ ಬೈರಿಕಟ್ಟೆ ನೆರವೇರಿಸಲಿದ್ದಾರೆ.

ಸೆ.15 ಮಂಗಳವಾರ ಬೆಳಿಗ್ಗೆ 5-20ರಿಂದ ಓಂಕಾರ-ಸುಪ್ರಭಾತ-ನಾಮಸಂಕೀರ್ತನೆ-ಮಂಗಳಾರತಿ, 8-30ರಿಂದ ಪೂಜಾರಾಧನೆ, ನಾಮಸಂಕೀರ್ತನೆ-ಮಂಗಳಾರತಿ
ಬೆಳಿಗ್ಗೆ 10 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಂಬಿಕಾ ಪದವಿ ಪೂರ್ವ ಕಾಲೇಜು ಪುತ್ತೂರು ಇಲ್ಲಿನ ಉಪನ್ಯಾಸಕ ವಿಷ್ಣು ಪ್ರದೀಪ್ ನಿಡ್ಡಾಜೆ, ವೆನ್‌ಲಾಕ್ ಆಸ್ಪತ್ರೆಯ ಡಾ. ವೇಣುಗೋಪಾಲ ದೇಲಂತಬೆಟ್ಟು, ಸಾಗರದ ಭಾಗವತ್ ಆಸ್ಪತ್ರೆಯ ನ್ಯೂರಾಲಜಿಸ್ಟ್ ಡಾ. ಸುಮಂತ್ ಬಲಗಂಡಿ, ಉಪಸ್ಥಿತರಿರಲಿದ್ದಾರೆ.

ಅಪರಾಹ್ನ 2.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ, ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೀಶ್ ಎಸ್.ಕೆ(IFS) ಹಾಗೂ ಸಾಗರದ ಭಾಗವತ್ ಆಸ್ಪತ್ರೆಯ ಶ್ರೀಮತಿ ಶ್ರೀಯಾ ಸುಮಂತ್ ಭಾಗವತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ 5.30ರಿಂದ ನಾಮಸಂಕೀರ್ತನೆ, 6ರಿಂದ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ “ಚತುರ್ಜನ್ಮ ಮೋಕ್ಷ” ಯಕ್ಷಗಾನ ಪ್ರದರ್ಶನ.
ಬಳಿಕ ಹಿರಿಯ ಯಕ್ಷಗಾನ ಕಲಾವಿದ ಉಮೇಶ್ ಶೆಟ್ಟಿ ಉಬರಡ್ಕ ಇವರು ಸಂಧ್ಯಾರತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟಿಸಲಿದ್ದಾರೆ.

ಸೆ.16 ಬುಧವಾರ ಪೂರ್ವಾಹ್ನ 5-20ರಿಂದ ಓಂಕಾರ, ಸುಪ್ರಭಾತ, ನಾಮಸಂಕೀರ್ತನೆ, ಮಂಗಳಾರತಿ, 6-00ರಿಂದ ಪೂಜಾರಾಧನೆ, 8-00ರಿಂದ ನಾಮಸಂಕೀರ್ತನೆ – ಮಂಗಳಾರತಿ ನಡೆಯಲಿದೆ.
ಬೆಳಿಗ್ಗೆ 9.30ಕ್ಕೆ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು, ಕರ್ನಾಟಕ ಉತ್ತರದ ರಾಜ್ಯಾಧ್ಯಕ್ಷರಾದ ಪದ್ಮನಾಭ ಪೈ ಎಂ. ಹಾಗೂ ರಾಜ್ಯ ಮಹಿಳಾ ಸಂಯೋಜಕಿ ಶ್ರೀಮತಿ ಪ್ರಿಯಾ ಪದ್ಮನಾಭ ಪೈ ಆಗಮಿಸಲಿದ್ದಾರೆ.
10.30ರಿಂದ ಪ್ರಾಥಮಿಕ ಹಾಗೂ ಪ್ರೌಡಶಾಲೆ ಮತ್ತು ಬಾಲಕಿಯರ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದ್ದು, ಉದ್ಘಾಟನೆಯನ್ನು ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ಮಾರ್ಗದರ್ಶಕರಾದ ಗೌ|| ವೆಂಕಟಲಕ್ಷ್ಮಿ ಅಕ್ಕನವರು ನೆರವೇರಿಸಲಿದ್ದಾರೆ. ಅಳಿಕೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ(ನಿ.)ದ ನಿರ್ದೇಶಕರಾದ ಶ್ರೀಮತಿ ಗೀತಾಲತಾ ಟಿ. ಶೆಟ್ಟಿ ಅಳಿಕೆಗುತ್ತು ಉಪಸ್ಥಿತರಿರುವರು.

ಅಪರಾಹ್ನ 2.30ರಿಂದ ವಿದ್ಯಾಗಣಪತಿ ಶೋಭಾಯಾತ್ರೆಗೆ ಬೊಳ್ನಾಡು ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಕಾರ್ನವರ್ ಶ್ರೀ ಚಂದ್ರಶೇಖರ ಮಡಿಯಾಲ ಹಾಗೂ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ(ನಿ.) ಅಳಿಕೆ ಇದರ ಅಧ್ಯಕ್ಷರು ರೂಪೇಶ್ ರೈ ಅವರು ಚಾಲನೆ ನೀಡಲಿದ್ದಾರೆ.

ಅಳಿಕೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಹಾಗೂ ಅಳಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕಾನ ಈಶ್ವರ ಭಟ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸಾಯಂಕಾಲ 6.30ಕ್ಕೆ ತೆಪ್ಪೋತ್ಸವ – ಜಲಸ್ತಂಭನ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಅಳಿಕೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಹಾಗೂ ಅಳಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕಾನ ಈಶ್ವರ ಭಟ್ ಆಗಮಿಸಲಿದ್ದಾರೆ.

ಈ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕಾರ್ಯದರ್ಶಿ, ಸಂಚಾಲಕರಾದ ಯಸ್. ಚಂದ್ರಶೇಖರ ಭಟ್, ಕೆ. ಎಸ್. ಕೃಷ್ಣ ಭಟ್ ವ್ಯವಸ್ಥಾಪಕ ಟ್ರಸ್ಟಿ, ಟ್ರಸ್ಟಿಗಳಾದ ಬಿ. ಆರ್. ವಾಸುಕಿ, ಯಸ್. ಯಸ್. ನಾಗಾನಂದ, ಎಂ. ಪದ್ಮನಾಭ ಪೈ , ಆಡಳಿತಾಧಿಕಾರಿ ಯಸ್. ಜನಾರ್ದನ ನಾಯಕ್, ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳು, ಅಳಿಕೆ ಇಲ್ಲಿನ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ನಿಲಯಪಾಲಕರು, ಅಧ್ಯಾಪಕ ವೃಂದ, ಕಾರ್ಯಕರ್ತರು ಮತ್ತು ವಿದ್ಯಾರ್ಥಿ ಬಳಗ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!