Monday, July 20, 2026
spot_imgspot_img
spot_imgspot_img

ಅಳಿಕೆ: ಎಸ್‌ಎಸ್ಎಲ್ ಸಿ ಪರೀಕ್ಷೆಯಲ್ಲಿ ಶ್ರೀ ಸತ್ಯ ಸಾಯಿ ಲೋಕಸೇವಾ ಪ್ರೌಢಶಾಲೆಗೆ 100% ಫಲಿತಾಂಶ

- Advertisement -
- Advertisement -

ಅಳಿಕೆ: 2025-26ನೇ ಸಾಲಿನ ಎಸ್‌. ಎಸ್.ಎಲ್.ಸಿ. ಪರೀಕ್ಷೆ-೧ ರಲ್ಲಿ ಶ್ರೀ ಸತ್ಯ ಸಾಯಿ ಲೋಕಸೇವಾ ಪ್ರೌಢಶಾಲೆ 100% ಫಲಿತಾಂಶವನ್ನು ದಾಖಲಿಸಿರುತ್ತದೆ. ಪರೀಕ್ಷೆ ಬರೆದ ಒಟ್ಟು 170 ವಿದ್ಯಾರ್ಥಿಗಳಲ್ಲಿ ಅತ್ಯುನ್ನತ ಶ್ರೇಣಿ (ಡಿಸ್ಟಿಂಕ್ಷನ್)ಯಲ್ಲಿ 105 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 58 ವಿದ್ಯಾರ್ಥಿಗಳು, ದ್ವಿತೀಯ ದರ್ಜೆಯಲ್ಲಿ 6 ವಿದ್ಯಾರ್ಥಿಗಳು, ಒಬ್ಬ ವಿದ್ಯಾರ್ಥಿ ಪಾಸ್ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಒಟ್ಟು 24 ವಿದ್ಯಾರ್ಥಿಗಳು 600ಕ್ಕೂ ಅಂಕಗಳನ್ನು ಗಳಿಸಿರುತ್ತಾರೆ. ನೀಲ್ ಕಮಲ್ ಮತ್ತು ಶಿವಪ್ರಸಾದ್ ಕೆ.ಪಿ. 619 ಅಂಕಗಳು ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ, ಸಮರ್ಥ್ ಬಿ.ಜೆ. 616 ಪಡೆಯುವ ಮೂಲಕ ದ್ವಿತೀಯ ಸ್ಥಾನ, ಪ್ರಣವ್ ಎ ಮೆಹಂದಳೆ ಮತ್ತು ಸಂಪ್ರೀತ್ ಮಹಂತೇಶ್ ನಶಿ 614 ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ತೃತೀಯ ಸ್ಥಾನ ಪಡೆದಿರುತ್ತಾರೆ.

ಅದರ ಮೂಲಕ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನೀಡುವ Quality weight age percentage ನಲ್ಲಿ 93.32% ದಾಖಲಿಸಿ ನಮ್ಮ ಶಾಲೆಯು A ದರ್ಜೆಯನ್ನು ಪಡೆದಿರುತ್ತದೆ. ಈ ಅಭೂತಪೂರ್ವ ಫಲಿತಾಂಶವು ಸಂಸ್ಥೆಯ ಗೌರವಾನ್ವಿತ ಮ್ಯಾನೇಜಿಂಗ್ ಟ್ರಸ್ಟೀ ಮತ್ತು ಕಾರ್ಯದರ್ಶಿಗಳು ನೀಡಿದ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಮೂಡಿಬಂದಿದೆ.

- Advertisement -

Related news

error: Content is protected !!