Tuesday, May 7, 2024
spot_imgspot_img
spot_imgspot_img

ಎಂಬಿಎ ಓದಲು ಇಟಲಿಗೆ ತೆರಳಿದ್ದ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ…!

- Advertisement -G L Acharya panikkar
- Advertisement -

ಭಾರತೀಯ ವಿದ್ಯಾರ್ಥಿಯೊಬ್ಬ ಇಟಲಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದ್ದು, ಇದೀಗ ಆತನ ಕುಟುಂಬದವರು ಸರ್ಕಾರದ ನೆರವು ಬಯಸಿದ್ದಾರೆ.

ಮೃತನನ್ನು ರಾಮ್‌ ರಾವತ್‌ ಎಂದು ಗುರುತಿಸಲಾಗಿದ್ದು, ಈತ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ನಿವಾಸಿ. ಪೊಲೀಸರ ಪ್ರಕಾರ, ರಾವುತ್ ಎಂಬಿಎ ಓದಲು ಇಟಲಿಗೆ ಹೋಗಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಹೊಸ ವರ್ಷದ ಶುಭಾಶಯಗಳನ್ನು ತಿಳಿಸಲು ರಾವತ್ ಅವರ ಪೋಷಕರು ಕರೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ.

ಪೋಷಕರು ಮಾಡಿದ ಕರೆಯನ್ನು ರಾವತ್‌ ಸ್ವೀಕರಿಸಲಿಲ್ಲ. ಹೀಗಾಗಿ ಸಂಶಯಗೊಂಡ ಅವರು ವಸತಿಗೃಹದ ಮಾಲೀಕರನ್ನು ಸಂಪರ್ಕಿಸಿದರು. ಈ ವೇಳೆ ಅವರು ಮತ್ತೊಂದು ಮನೆಯ ವಾಶ್ ರೂಂನಲ್ಲಿ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ. ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಪೋಷಕರು ಕಂಗಾಲಾಗಿದ್ದಾರೆ. ಅಲ್ಲದೇ ಆತನ ಮೃತದೇಹವನ್ನು ಭಾರತಕ್ಕೆ ಕರೆತರಲು ಜಾರ್ಖಂಡ್‌ನ ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳನ್ನು ಸಂಪರ್ಕಿಸಿ ಮನವಿ ಮಾಡಿಕೊಂಡಿದ್ದಾರೆ.

ಘಟನೆಯ ಕುರಿತು ಮಾತನಾಡಿದ ಪಶ್ಚಿಮ ಸಿಂಗ್‌ಭೂಮ್‌ನ ಡೆಪ್ಯೂಟಿ ಕಮಿಷನರ್ ಅನನ್ಯ ಮಿತ್ತಲ್, ರಾಮ್ ರಾವತ್ ಸಾವಿನ ಬಗ್ಗೆ ನನಗೆ ಮಾಹಿತಿ ಬಂದಿದೆ. ಅಗತ್ಯ ಕ್ರಮಕ್ಕಾಗಿ ಗೃಹ ಇಲಾಖೆ ಮತ್ತು ಜಾರ್ಖಂಡ್‌ನ ವಲಸೆ ಸೆಲ್‌ಗೆ ತಿಳಿಸಲಾಗಿದೆ ಎಂದು ಹೇಳಿದರು. ಪ್ರಕರಣದ ಎಲ್ಲಾ ಬೆಳವಣಿಗೆಗಳ ಮೇಲೆ ನಿಗಾ ಇಡುತ್ತಿದ್ದೇನೆ. ರಾಮ್‌ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಮಿತ್ತಲ್ ಹೇಳಿದ್ದಾರೆ.

- Advertisement -

Related news

error: Content is protected !!